Mysore
22
overcast clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ರೈತರ ಹಿತದೃಷ್ಠಿಯಿಂದ ಒಳ್ಳೆಯ ನಿರ್ಧಾರ: ಚೆಲುವರಾಜು

ಮೈಸೂರು: ಹಾಲಿನ ದರ 4 ರೂ. ಏರಿಕೆ ಮಾಡುವ ಮೂಲಕ ರೈತರ ಹಿತದೃಷ್ಠಿಯಿಂದ ಸರ್ಕಾರ ಒಳ್ಳೆಯ ನಿರ್ಧಾರ ಮಾಡಿದೆ ಎಂದು ಮೈಮುಲ್‌ ಅಧ್ಯಕ್ಷ ಚೆಲುವರಾಜು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಯುಗಾದಿ ಹಬ್ಬದಂದು ಸರ್ಕಾರ ರೈತರಿಗೆ ವಿಶೇಷ ಕೊಡುಗೆ ನೀಡಿದೆ. ಇಂತಹ ನಿರ್ಧಾರ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ಕೇರಳ, ತಮಿಳುನಾಡು, ಗುಜರಾತ್‌ ಭಾಗದಲ್ಲಿ ಸಾಮಾನ್ಯ ಹಾಲಿಗೆ 54 ರೂ ಇದೆ. ನಮ್ಮಲ್ಲಿ ಬೆಲೆ ಏರಿಕೆ ಮಾಡಿದರೂ ಸಾಮಾನ್ಯ ಹಾಲಿಗೆ 46 ರೂ. ಇದೆ ಎಂದು ತಿಳಿಸಿದರು.

ನಮ್ಮ ನಂದಿನಿ ಹಾಲು ಪರಿಶುದ್ಧ ಹಾಲು. ಈಗ ಹೆಚ್ಚಳ ಮಾಡಿರುವ ಹಣ ರೈತರಿಗೆ ನೇರವಾಗಿ ತಲುಪಿಸಲಾಗುತ್ತದೆ. ನಮ್ಮ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲೇನು ಇಲ್ಲ. ಈ ವರ್ಷ ವಾರ್ಷಿಕ 6 ರಿಂದ 7 ಕೋಟಿ ಲಾಭದಲ್ಲಿ ಇದೆ ಎಂದು ಹೇಳಿದರು.

ಸಾಮಾನ್ಯ ದಿನಗಳಿಗಿಂತ ಬೇಸಿಗೆ ಸಂದರ್ಭದಲ್ಲಿ ನಂದಿನಿ ಮಜ್ಜಿಗೆ, ಮೊಸರು, ಲಸ್ಸಿ ಹೆಚ್ಚು ಮಾರಾಟವಾಗುತ್ತದೆ. ಬೇಡಿಕೆ ಎಷ್ಟೇ ಬಂದರೂ ಪೂರೈಸುವ ನಿಟ್ಟಿನಲ್ಲಿ ನಮ್ಮ ಪ್ರೊಡಕ್ಸನ್‌ ತಂಡ ಸಿದ್ದವಿದೆ ಎಂದು ತಿಳಿಸಿದರು.

Tags:
error: Content is protected !!