ಮೈಸೂರು: ಮೈಸೂರು ದಸರಾಗೆ ಗೊಂಬೆ ಬಲೂನ್ ಮಾರಲು ಬಂದಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಮೈಸೂರು ನಗರದ ವಸ್ತು ಪ್ರದರ್ಶನ ಮುಂಭಾಗ ಸುಮಾರು 10-23 ವರ್ಷದ ಬಾಲಕಿ ಶವ ಪತ್ತೆಯಾಗಿದೆ. ಈ ಬಾಲಕಿ ಮೈಸೂರು ದಸರಾಗೆ ಗೊಂಬೆ ಬಲೂನ್ ಮಾರಲು ಬಂದಿದ್ದಳು.
ಮೈಸೂರಿನ ನಜರಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಮಾಹಿತಿ ಪ್ರಕಾರ ಬಾಲಕಿ ನಿನ್ನೆಯಿಂದಲೂ ನಾಪತ್ತೆಯಾಗಿದ್ದಳು ಎಂಬ ಮಾಹಿತಿ ಲಭ್ಯವಾಗಿದ್ದು, ಇಂದು ಬೆಳಿಗ್ಗೆ ಮಳೆ ಬಂದ ಪರಿಣಾಮ ಬೇರೆಡೆ ತೆರಳಲು ಕುಟುಂಬಸ್ಥರು ತಯಾರಿ ನಡೆಸುತ್ತಿದ್ದರು. ಈ ವೇಳೆ ಬಾಲಕಿ ಇಲ್ಲದ್ದನ್ನು ಕಂಡು ಗಾಬರಿಗೊಂಡಿದ್ದರು. ಹೀಗಿರುವಾಗಲೇ ಪಕ್ಕದಲ್ಲೇ ಇರುವ ಚರಂಡಿ ಬಳಿ ಬಾಲಕಿಯ ಶವ ಪತ್ತೆಯಾಗಿದೆ.





