Mysore
26
clear sky

Social Media

ಶನಿವಾರ, 18 ಏಪ್ರಿಲ 2026
Light
Dark

ನಮ್ಮ ತಂದೆಗೆ ಪಕ್ಷದ ವಿಚಾರದಲ್ಲಿ ಬೇಸರ ಇರುವುದು ಸತ್ಯ: ಶಾಸಕ ಜಿ.ಡಿ.ಹರೀಶ್‌ ಗೌಡ

g t devegowda sad about congress party issue said G D Harish Gowda

ಮೈಸೂರು: ನಮ್ಮ ತಂದೆಗೆ ಪಕ್ಷದ ವಿಚಾರದಲ್ಲಿ ಬೇಸರ ಇರುವುದು ಸತ್ಯ ಎಂದು ಪುತ್ರ, ಶಾಸಕ ಜಿ.ಡಿ.ಹರೀಶ್‌ ಗೌಡ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ತಂದೆಯವರು ಪಕ್ಷದ ಮೇಲೆ ಬೇಸರ ಇರುವುದರಿಂದಲೇ ಅಸಮಾಧಾನದಿಂದ ಜೆಡಿಎಸ್‌ನಿಂದ ದೂರ ಉಳಿದಿದ್ದಾರೆ. ಪಕ್ಷದ ವರಿಷ್ಠರು ಜಿ.ಟಿ.ದೇವೇಗೌಡರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಪಕ್ಷದ ಬಗ್ಗೆ ಹೆಚ್ಚು ಮಾತನಾಡಲು ಆಗಲ್ಲ.‌ ನಾನು ಜೆಡಿಎಸ್‌ನಲ್ಲೇ ಇದ್ದೇನೆ. ಮುಂದೆಯೂ ಜೆಡಿಎಸ್‌ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಹುಣಸೂರು ಕ್ಷೇತ್ರದ ಜನರು ನನ್ನನ್ನು ಜೆಡಿಎಸ್‌ನಿಂದ ಗೆಲ್ಲಿಸಿದ್ದಾರೆ. ಹೀಗಾಗಿ ಜನರ ನಂಬಿಕೆಗೆ ದ್ರೋಹ ಮಾಡಲ್ಲ. ಮತ್ತೊಮ್ಮೆ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವುದೇ ನಮ್ಮ ಉದ್ದೇಶ ಎಂದರು.

Tags:
error: Content is protected !!