ಮೈಸೂರು : ಗುಡ್ ನ್ಯೂಸ್ ಯೂಟ್ಯೂಬ್ ಚಾನೆಲ್ ಮಾಲೀಕ ರಾಘವೇಂದ್ರ ವಿರುದ್ಧ ಎರಡು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ.
ಮೊದಲನೇ ಪ್ರಕರಣದಲ್ಲಿ ಸಮಾಜ ಸೇವಕ ವಾಜಮಂಗಲದ ಶಿವು ಎಂಬವರು ರಾಘವೇಂದ್ರ ಅವರ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನ.30 ರಂದು ರಾಘವೇಂದ್ರ ಅವರು ಪರಿಶಿಷ್ಟ ಜಾತಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡುವಂತಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಮೈಸೂರು | ಪೇದೆಯಿಂದ 35 ಲಕ್ಷ ರೂ. ವಂಚನೆ : ದೂರು
ಎರಡನೇ ಪ್ರಕರಣದಲ್ಲಿ ಓಂ ಸಾಯಿ ಟ್ರಸ್ಟ್‌ನಲ್ಲಿ ಸಹಾಯಕಳಾಗಿ ಕೆಲಸ ನಿರ್ವಹಿಸುತ್ತಿದ್ದ ಜಯಲಕ್ಷಿ ಎಂಬವರು ರಾಘವೇಂದ್ರ ವಿರುದ್ಧ ಜಾತಿ ನಿಂದನೆ ಹಾಗೂ ಅವಾಚ್ಯ ಪದ ಬಳಕೆಯ ಅಡಿಯಲ್ಲಿ ಡಿಸಿಆರ್‌ಇ ಪ್ರಾದೇಶಿಕ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ನ.9 ರಂದು ರಾಘವೇಂದ್ರ ಅವರು ನಮ್ಮ ಸಂಸ್ಥೆಗೆ ಭೇಟಿ ನೀಡಿದ್ದರು. ಈ ವೇಳೆ ಸಂಸ್ಥೆಯ ರಾಣಿ ಪ್ರಭ ಅವರು ಕಾಫಿ ನೀಡುವಂತೆ ನನಗೆ ಹೇಳಿದರು. ನಾನು ಕಾಫಿ ಕೊಡಲು ಮುಂದಾದಾಗ ನೀನು ಕೀಳು ಜಾತಿಯವಳು ನನಗೆ ಕಾಫಿ ಕೊಡಲು ಬಂದಿದ್ದೀಯಾ ಎಂದು ನಿಂದಿಸಿದ್ದಲ್ಲದೆ, ನನ್ನನ್ನು ಕೈಗಳಿಂದ ದೂಡಿದರು. ಇಂತಹವರ ಕೈಲಿ ಕಾಫಿ ಕೊಡಿಸುತ್ತೀರಾ ಎಂದು ರಾಣಿ ಪ್ರಭ ಅವರಿಗೆ ನಿಂದಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.





