ಮೈಸೂರು: ಹುಲಿ ದಾಳಿಗೆ ರೈತ ಬಲಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಇಂತಹ ಘಟನೆ ಮರುಕಳಿಸದ ರೀತಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಿ ದಾಳಿಗೆ ಒಳಗಾದ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡುತ್ತೇವೆ. ಇಂತಹ ಘಟನೆ ಮರುಕಳಿಸದ ರೀತಿ ಕ್ರಮಕ್ಕೆ ಮುಂದಾಗುತ್ತೇವೆ. ಘಟನೆಗಳು ನಡೆಯಲು ಕಾಡು ಕ್ಷೀಣಿಸುತ್ತಿರುವುದು ಒಂದು ಪ್ರಮುಖ ಕಾರಣ. ಹುಲಿಗಳ ಸಂಖ್ಯೆ ಹೆಚ್ಚಳ ಮತ್ತೊಂದು ಕಾರಣವಾಗಿದೆ. ಗುಂಪು ಸೇರಿದಾಗ ಜನರು ಕೂಗಾಟ ನಡೆಸುತ್ತಾರೆ.
ಇದನ್ನು ಓದಿ: ಹುಲಿ ದಾಳಿಗೆ ರೈತ ಬಲಿ ಪ್ರಕರಣ: ಸಚಿವ ಈಶ್ವರ್ ಖಂಡ್ರೆಗೆ ರೈತರ ಘೇರಾವ್
ಇದರಿಂದ ಭಯಗೊಂಡ ಕಾಡು ಪ್ರಾಣಿಗಳು ಏಕಾಏಕಿ ದಾಳಿ ಮಾಡುತ್ತವೆ. ಇದಕ್ಕೆಲ್ಲಾ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ. ಎಚ್‌ಡಿ.ಕೋಟೆ ಭಾಗದಲ್ಲಿ ಅಕ್ರಮ ರೆಸಾರ್ಟ್‌ಗಳು ಹೆಚ್ಚಾಗಿವೆ. ಈ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ಸಂಬಂಧ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಸರಗೂರಿನಲ್ಲಿ ಶವ ಇರಿಸಲು ವ್ಯವಸ್ಥೆ ಇಲ್ಲ. ಆ ಕಾರಣಕ್ಕೆ ಮೈಸೂರಿಗೆ ಶವ ತಂದಿದ್ದಾರೆ. ಇದು ಮಂತ್ರಿಗಳು ನೋಡಲಿ ಎಂಬ ಕಾರಣ ಅಲ್ಲ ಎಂದು ಹೇಳಿದರು.



