Mysore
28
few clouds

Social Media

ಗುರುವಾರ, 16 ಜನವರಿ 2025
Light
Dark

ರೈಲು ಕೋಚ್‌ ರೆಸ್ಟೋರೆಂಟ್‌ ಸ್ಥಾಪನೆ: ಗುತ್ತಿಗೆ ನೀಡಲು ಇ-ಹರಾಜು

ಮೈಸೂರು: ಮೈಸೂರು ಮತ್ತು ಚಾಮರಾಜಪುರಂ ರೈಲು ನಿಲ್ದಾಣಗಳಲ್ಲಿ ರೈಲು ಕೋಚ್‌ ರೆಸ್ಟೋರೆಂಟ್‌(ರೈಲ್ವೆ ಆಹಾರ ಮಳಿಗೆ)ಗಳನ್ನು ಗುತ್ತಿಗೆ ಆಧಾರದಲ್ಲಿ ಇ-ಹರಾಜು ಮೂಲಕ ಹಂಚಿಕೆ ಮಾಡಲು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಘೋಷಣೆ ಮಾಡಿದೆ.

ನಿಷ್ಕ್ರಿಯಗೊಂಡ ರೈಲು ಭೋಗಿಗಳಿಂದ ಅಭಿವೃದ್ದಿಪಡಿಸಲಾಗುವ ಈ ವಿಶಿಷ್ಟವಾದ ಉಪಹಾರ ಸ್ಥಳಗಳು, ಪ್ರಯಾಣಿಕರು ಮತ್ತು ಸಂದರ್ಶಕರಿಗೆ ಆಧುನಿಕ ಸೌಕರ್ಯಗಳನ್ನು ನೀಡುವ ಮೂಲಕ ಆಹಾರದ ಸವಿಯ ಅನುಭವವನ್ನು ಒದಗಿಸುತ್ತವೆ.

ನಿಲ್ದಾಣದ ಆವರಣಗಳಲ್ಲಿ ನೆಲೆಗೊಂಡು ಕಾರ್ಯ ನಿರ್ವಹಿಸುವ ಈ ರೆಸ್ಟೋರೆಂಟ್‌ಗಳು ಪ್ರಯಾಣಿಕರ ಆಗತ್ಯಗಳನ್ನು ಪೂರೈಸುವ ಜೊತೆಗೆ ಉತ್ತಮ ಗುಣಮಟ್ಟದ ಆಹಾರ ಮತ್ತು ಉಪಹಾರಗಳನ್ನು ನೀಡಿ ಒಟ್ಟಾರೆ ಪ್ರಯಾಣಿಕರಿಗೆ ಪ್ರಯಾಣದ ಆಹ್ಲಾದಕರ ಅನುಭವವನ್ನು ಹೆಚ್ಚಿಸುತ್ತವೆ.

ಈ ಸ್ಥಳಗಳನ್ನು ಗುತ್ತಿಗೆ ನೀಡಲು ಮೈಸೂರು ವಿಭಾಗವು ಈ-ಹರಾಜನ್ನು ನಡೆಸುತ್ತಿದೆ. ಇ-ಹರಾಜನ್ನು ಜನವರಿ.20ರಂದು ಮಧ್ಯಾಹ್ನ 12:00 ಗಂಟೆಗೆ ವೆಬ್‌ಸೈಟ್‌ನ ಈ.ಆರ್‌.ಇ.ಪಿ.ಎಸ್‌ (IREPS) ಪೋರ್ಟಲ್‌ ಮೂಲಕ ನಿಗದಿಪಡಿಸಲಾಗಿದೆ. ಈ ಪೋರ್ಟಲ್‌ನಲ್ಲಿ ನೊಂದಾಯಿಸಿರುವ ಅರ್ಹ ಗುತ್ತಿಗೆದಾರರನ್ನು ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

Tags: