ಮೈಸೂರು: ನಾಡಹಬ್ಬ ದಸರಾ ಉದ್ಘಾಟನೆ ವೇಳೆ ಲೇಖಕಿ ಬಾನು ಮುಷ್ತಾಕ್ ನಡವಳಿಕೆ ನೋಡುತ್ತೇವೆ. ನಮ್ಮ ಧರ್ಮಕ್ಕೆ ಧಕ್ಕೆ ಬರುವ ರೀತಿ ನಡೆದುಕೊಂಡರೆ ಮುಂದಿನ ವಿಚಾರದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.
ನಾಳೆ ದಸರಾ ಉದ್ಘಾಟನೆ ಕುರಿತು ಮಾತನಾಡಿದ ಅವರು, ನಾವು ಬಾನು ಮುಷ್ತಾಕ್ ನಡವಳಿಕೆ ವಿರುದ್ಧ ಧ್ವನಿ ಎತ್ತಿದ್ದೇವೆ ನಾಡಹಬ್ಬ ದಸರಾ ದೇಶವೇ ನೋಡುವ ಹಬ್ಬ. ನಾಳೆ ನಮ್ಮೂರ ಹಬ್ಬ. ನಾವು ಅದರಲ್ಲಿ ಭಾಗಿಯಾಗುತ್ತೇವೆ. ನಾಳಿನ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುತ್ತೇವೆ.
ಆದ್ದರಿಂದ ನಾಳೆ ಬಿಜೆಪಿಯಿಂದ ಯಾವುದೇ ಪ್ರತಿಭಟನೆ ಇರಲ್ಲ. ಉದ್ಘಾಟನೆ ವೇಳೆ ಬಾನು ಮುಷ್ತಾಕ್ ನಡವಳಿಕೆ ನೋಡುತ್ತೇವೆ. ನಮ್ಮ ಧರ್ಮಕ್ಕೆ ಧಕ್ಕೆ ಬರುವ ರೀತಿ ನಡೆದುಕೊಂಡರೆ ಮುಂದಿನ ವಿಚಾರದ ಬಗ್ಗೆ ತೀರ್ಮಾನ ಮಾಡುತ್ತೇವೆ. ಯಾವುದೇ ಪ್ರತಿಭಟನೆಯನ್ನೂ ನಾವು ಮಾಡಲ್ಲ ಎಂದು ಹೇಳಿದರು.





