ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗವಾದ ಅರಮನೆಯ ಮುಂಭಾಗ ಕ್ರಿಸ್‍ಮಸ್ ರಜೆಯ ಸಂಭ್ರಮದ ನಡುವೆಯೇ ಗುರುವಾರ ರಾತ್ರಿ ನಡೆದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬಲೂನ್ ಮಾರುತ್ತಿದ್ದ ಓರ್ವ ಮೃತಪಟ್ಟಿದ್ದು, ಹಲವರು ಗಂಭೀರಗೊಂಡಿದ್ದಾರೆ.
ಇನ್ನೂ ಬಲೂನ್ ಮಾರುತ್ತಿದ್ದ ಮೃತ ವ್ಯಕ್ತಿ ಉತ್ತರ ಪ್ರದೇಶದಿಂದ ಬಲೂನ್ ಮಾರಲು ನಾಲ್ವರು ಮೈಸೂರಿಗೆ ಬಂದಿದ್ದಾರೆ. ಸ್ಫೋಟದ ಬಳಿಕ ಸಲೀಂ ಜೊತೆಗೆ ಬಂದಿದ್ದ ಉಳಿದವರು ನಾಪತ್ತೆಯಾಗಿದ್ದು, ಇತರರ ನಡೆ ಅನುಮಾನ ಹೆಚ್ಚಿಸಿದೆ. ಷರೀಫ್ ಲಾಡ್ಜ್ ಶೋಧಕ್ಕೆ ಇಳಿದ ಪೊಲೀಸರಿಗೆ ಒಂದು ಸೈಕಲ್‍ನಲ್ಲಿ ಶಾಲು ಸಿಂಗ್ ಎಂಬ ಹೆಸರಿನ ಕ್ಯೂ ಆರ್ ಕೋಡ್ ಪತ್ತೆಯಾಗಿದೆ. ಈ ವೇಳೆ ದೊರೆತ ಮೊಬೈಲ್‍ನಲ್ಲಿ ಆತ ಅರಮನೆಯ ಒಳಗೆ ಪ್ರೇಕ್ಷಕನಂತೆ ಹೋಗಿ ಕೆಲ ಫೋಟೊಗಳನ್ನು ತೆಗೆದು ತನ್ನ ಡಿಪಿಯಲ್ಲಿ ಅಳವಡಿಸಿಕೊಂಡಿರುವುದು ಕಂಡುಬಂದಿದೆ.
ಬಲೂನ್ ಮಾರಾಟ ಮಾಡಲು ಬಂದಿರುವ ಅನೇಕ ಬಲೂನ್ ಮಾರಾಟಗಾರರು ಇದೇ ಲಾಡ್ಜ್ ನಲ್ಲಿ ತಂಗುತ್ತಿದ್ದರು ಎನ್ನಲಾಗ್ತಿದೆ. ಮೃತ ಸಲೀಂ ಕೂಡ ಷರೀಫ್ ಲಾಡ್ಜ್ ನಲ್ಲಿ ತಂಗಿದ್ದ. ಸದ್ಯ ಲಾಡ್ಜ್ ಮುಂಭಾಗ ಇನ್ನೂ 3 ಸೈಕಲ್ ನಿಂತಿವೆ. ಬಲೂನ್ ಮಾರಾಟ ಮಾಡಲು ಬಳಸುತ್ತಿದ್ದ ಸೈಕಲ್ ಹಾಗೂ ಲಾಡ್ಜ್ ನಾ ಸಿಸಿಟಿವಿ ಫೂಟೇಜ್ ಗಳನ್ನ ಪೊಲೀಸರು ಕಲೆ ಹಾಕಿದ್ದಾರೆ.





