ಮೈಸೂರು : ಇಲ್ಲಿನ ರಾಘವೇಂದ್ರ ನಗರದ ಸುಮನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚೆಕ್ ಬೌನ್ಸ್ ಕೇಸ್ ಹಾಕಿದ್ರೆ ಹುಷಾರ್ ಮರ್ಡರ್ ಮಾಡ್ತೀನಿ ಎಂದು ಶಾಲೆ ಕಾರ್ಯದರ್ಶಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ ಕಿಟಕಿ ಗಾಜುಗಳನ್ನ ಪುಡಿ ಪುಡಿ ಮಾಡಿ ಪುಂಡಾಟ ನಡೆಸಿದ ಅಬ್ದುಲ್ ಶಾಹಿದ್ ಹಾಗೂ ಸದಾಕತ್ ಎಂಬುವರ ಮೇಲೆ ದೂರು ದಾಖಲಾಗಿದೆ. ಶಾಲೆ ಕಾರ್ಯದರ್ಶಿ ಅನ್ಸರ್ ಪಾಷಾ ಪ್ರಕರಣ ದಾಖಲಿಸಿದವರು.
ಇದನ್ನು ಓದಿ: ಶಾಮನೂರು | ಓದಿದ್ದೂ 10ನೇ ತರಗತಿ ; ಕಟ್ಟಿದ್ದೂ ಬೃಹತ್ ಶಿಕ್ಷಣ ಸಾಮ್ರಾಜ್ಯ…..!
ಅನ್ಸರ್ ಪಾಷಾ ಅವರು 2023 ರಲ್ಲಿ ದೊಡ್ಡಮ್ಮ ಸುಲ್ತಾನಾ ಅವರಿಗೆ 3 ಲಕ್ಷ ಸಾಲ ನೀಡಿದ್ದರು. ಸಾಲ ಮರುಪಾವತಿಸಲು 2.40 ಲಕ್ಷಕ್ಕೆ ಚೆಕ್ ನೀಡಿದ್ದರು. ಚೆಕ್ ನಗದೀಕರಿಸಲು ಅನ್ಸರ್ ಪಾಷಾ ಬ್ಯಾಂಕ್ ಗೆ ಸಲ್ಲಿಸಿದಾಗ ಬೌನ್ಸ್ ಆಗಿದೆ. ಹಣ ವಸೂಲಿಗಾಗಿ ಅನ್ಸರ್ ಪಾಷಾ ನೋಟಿಸ್ ನೀಡಿದ್ದಾರೆ. ಈ ವೇಳೆ ಶಾಲೆಗೆ ಬಂದ ಸಂಬಂಧಿಕರಾದ ಅಬ್ದುಲ್ ಶಾಹಿದ್ ಹಾಗೂ ಸದಾಕತ್ ಚೆಕ್ ಬೌನ್ಸ್ ಕೇಸ್ ಹಾಕಿದ್ರೆ ಮರ್ಡರ್ ಮಾಡಿಸುವುದಾಗಿ ಬೆದರಿಕೆ ಹಾಕಿ ಅನ್ಸರ್ ಪಾಷಾ ಜೊತೆ ಅನುಚಿತವಾಗಿ ನಡೆದುಕೊಂಡು ಶಾಲೆಯಿಂದ ಹೊರಗೆ ತಳ್ಳಿ ಕಿಟಕಿ ಗಾಜುಗಳನ್ನ ಪುಡಿ ಪುಡಿ ಮಾಡಿ ಪುಂಡಾಟ ನಡೆಸಿದ್ದಾರೆ. ಇಬ್ಬರ ವಿರುದ್ದ ಕಾನೂನ ಕ್ರಮ ಕೈಗೊಳ್ಳುವಂತೆ ಅನ್ಸರ್ ಪಾಷಾ ಪ್ರಕರಣ ದಾಖಲಿಸಿದ್ದಾರೆ.




