ಮೈಸೂರು: ಆಕಸ್ಮಿಕವಾಗಿ ಚರಂಡಿಗೆ ಬಿದ್ದಿದ್ದ ಹಸುವನ್ನು ರಕ್ಷಣೆ ಮಾಡಲಾಗಿದೆ.
ಮೈಸೂರಿನ ನ್ಯೂ ಕಾಂತರಾಜ ಅರಸು ರಸ್ತೆಯ ನಿವೇದಿತಾ ನಗರ ಪಾರ್ಕ್ ಪಕ್ಕದಲ್ಲಿರುವ ಹೋಟೆಲ್ ಮುಂಭಾಗ ಹಸುವೊಂದು ಆಕಸ್ಮಿಕವಾಗಿ ಚರಂಡಿಗೆ ಬಿದ್ದಿತ್ತು.
ಕೂಡಲೇ ಸ್ಥಳೀಯರಾದ ಮಾದೇಶ್ ಎಂಬುವವರು, ಜಿಲ್ಲಾಧಿಕಾರಿಗಳ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ವಿಷಯ ತಿಳಿಸಿದರು. ತಕ್ಷಣ ಕರೆಗೆ ಸ್ಪಂದಿಸಿದ ಸಿಬ್ಬಂದಿ ಕೀರ್ತಿ ಅವರು, ಮೈಸೂರು ಮಹಾನಗರ ಪಾಲಿಕೆಯ ಫೈರ್ ಇಂಜಿನ್ ಡಿಪಾರ್ಟ್‌ಮೆಂಟ್ ಅವರನ್ನು ಸ್ಥಳಕ್ಕೆ ಕಳುಹಿಸಿ ಅಪಾಯದಲ್ಲಿದ್ದ ಹಸುವನ್ನು ರಕ್ಷಣೆ ಮಾಡಲಾಗಿದೆ.





