ಮೈಸೂರು: 60 ವರ್ಷ ಮೇಲ್ಪಟ್ಟವರಿಗೆ ಅನ್ನಪೂರ್ಣ ಯೋಜನೆಯಡಿ 10 ಕೆಜಿ ಅಕ್ಕಿ ನೀಡುತ್ತಿದ್ದೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2011ರ ಜನಗಣತಿ ಪ್ರಕಾರ 5 ಕೋಟಿಗೂ ಹೆಚ್ಚಿನ ಜನತೆಗೆ ಆಹಾರ ನೀಡುತ್ತಿದ್ದೇವೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಯಾವುದೇ ನಷ್ಟವಿಲ್ಲದೆ ನಡೆಸಿಕೊಂಡು ಬಂದಿದ್ದೇವೆ. ನಾಲ್ಕು ತಿಂಗಳ ಅವಧಿಗೆ ಬೇಕಾದ ಆಹಾರ ದಾನ್ಯವನ್ನ ಶೇಖರಣ ಘಟಕದಲ್ಲಿ ಶೇಖರಣೆ ಮಾಡುತ್ತೇವೆ. 60 ವರ್ಷ ಮೇಲ್ಪಟ್ಟವರಿಗೆ ಅನ್ನಪೂರ್ಣ ಯೋಜನೆಯಡಿ 10ಕೆಜಿ ಅಕ್ಕಿ ನೀಡುತ್ತಿದ್ದೇವೆ. ರಾಜ್ಯದಲ್ಲಿ ಇರುವ 60 ವರ್ಷ ಮೇಲ್ಪಟ್ಟವರ ಬಗ್ಗೆ ರಾಜ್ಯ ಸರ್ಕಾರ ನಮಗೆ ಮಾಹಿತಿ ನೀಡಿಲ್ಲ. ಇದು ನಮ್ಮ ದುರ್ದೈವವೇ ಆಗಿದೆ. ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡಲ್ಲ ಎಂದು ಹೇಳಿದ್ರು. ಈ ಯೋಜನೆ ಘೋಷಣೆ ಮಾಡುವಾಗ ನಮ್ಮ ಜೊತೆ ಚರ್ಚೆ ಮಾಡಿಲ್ಲ. ರಾಜ್ಯದಲ್ಲಿ 50 ಲಕ್ಷ ಟನ್ ಅಕ್ಕಿಯನ್ನ ರೈತರು ಬೆಳೆಯುತ್ತಾರೆ. ಈ ಎಲ್ಲಾ ವಿಚಾರವನ್ನ ಸಲಹಾ ಸಮಿತಿಯಲ್ಲಿ ಚರ್ಚೆ ಮಾಡಿದ್ದೇವೆ. ಇದನ್ನ ಕೇಂದ್ರ ಆಹಾರ ಸಚಿವರಿಗೆ ತಿಳಿಸುತ್ತೇವೆ ಎಂದು ಭಾರತೀಯ ಆಹಾರ ನಿಗಮ ಕುರಿತು ಮಾಹಿತಿ ನೀಡಿದರು.