ಮಾಸ್ಕೋ:ಅಜರ್‌ಬೈಜಾನ್‌ನಿಂದ ರಷ್ಯಾಕ್ಕೆ ತೆರಳುತ್ತಿದ್ದ ಎಂಬ್ರೆಯರ್ ಪ್ರಯಾಣಿಕ ವಿಮಾನವೊಂದು ಕಝಾಕಿಸ್ತಾನದ ಅಕ್ಟೌ ನಗರದ ಸಮೀಪದಲ್ಲಿ ಪತನಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಮಾನ ಅಜರ್‌ಬೈಜಾಣ್ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ವಿಮಾನ ಇದಾಗಿದ್ದು, ಐವರು ಸಿಬ್ಬಂದಿಯೊಂದಿಗೆ ಅಂದಾಜು 67 ಮಂದಿ ಪ್ರಯಾಣಿಸುತ್ತಿದ್ದರು.ಇದು ಅಜೆರ್‌ಬೈಜಾನ್‌ನ ರಾಜಧಾನಿ ಬಾಕುವಿನಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ಸಂಚಾರ ಮಾಡುತ್ತಿತ್ತು. ಆದರೆ ಅಕ್ಟೌ ನಗರದಿಂದ ಸರಿಸುಮಾರು 3 ಕಿ.ಮೀ.ಇರುವಾಗ
ಗ್ರೋಜ್ನಿಯ ಮಂಜಿನಿಂದಾಗಿ ತನ್ನ ಸ್ಥಳ ಮಾರ್ಗವನ್ನು ಬದಲಾಯಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇನ್ನು ವಿಮಾನ ನಿಲ್ದಾಣದ ಸಮೀಪದಲ್ಲೇ ತೆರೆದ ಮೈದಾನದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದ್ದು, ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿಯನ್ನು ಆರಿಸಿದ್ದಾರೆ. ಹೀಗಾಗಿ ವಿಮಾನದ ಹಿಂಭಾಗದ ತುದಿಯಲ್ಲಿರುವ ತುರ್ತು ನಿರ್ಗಮನದಿಂದ ಪ್ರಯಾಣಿಕರನ್ನು ಡಿಬೋರ್ಡಿಂಗ್ ಮಾಡಲಾಗಿದೆ. ಆದರೆ ಈ ವಿಮಾನದಲ್ಲಿ ಪ್ರಯಾಣಿಕರಲ್ಲಿ 12 ಮಂದಿ ಬದುಕುಳಿದ್ದಾರೆ ಎಂಬ ಮಾಹಿತಿಯನ್ನು ಕಝಾಕಿಸ್ತಾನದ ತುರ್ತು ಸಚಿವಾಲಯ ತನ್ನ ಹೇಳಿಕೆಯಲ್ಲಿ ಪ್ರಕಟಿಸಿದೆ.