Mysore
20
overcast clouds
Light
Dark

ಚೀನಾದಲ್ಲಿ 6.1ರ ತೀವ್ರತೆಯ ಭೂಕಂಪ: ಅಪಾರ ಸಾವು ನೋವು

ನವದೆಹಲಿ: ವಾಯವ್ಯ ಚೀನಾದ ಗನ್ನು- ಕ್ವಿಂಫೈ ಗಡಿಯಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಭಾರಿ ಪ್ರಮಾಣದ ಸಾವು ನೋವುಗಳುಂಟಾಗಿರುವ ಬಗ್ಗೆ ವರದಿಯಾಗಿದೆ. ಅಪಾರ ಪ್ರಮಾಣದ ಆಸ್ತಿಗಳಿಗೂ ವ್ಯಾಪಕ ಹಾನಿಯಾಗಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.1ರಷ್ಟಿತ್ತು ಎಂದು ಮೂಲಗಳು ಹೇಳಿವೆ.

ಗನ್ನು- ಕ್ವಿಂಫೈ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮಡಿದವರ ಸಂಖ್ಯೆ 100ನ್ನು ದಾಟಿದೆ ಎಂದು ಅಧಿಕೃತ ಸುದ್ದಿಸಂಸ್ಥೆ ಕ್ಸಿಗ್ಗುವಾ ವರದಿ ಮಾಡಿದೆ.

ಗನ್ನು ಮತ್ತು ಪಕ್ಕದ ಕ್ವಿಂಫೈ ಪ್ರಾಂತ್ಯದಲ್ಲಿ ಹಲವು ಬಾರಿ ಲಘು ಕಂಪನಗಳೂ ಸಂಭವಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ವರದಿ ಹೇಳಿದೆ. ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ರಾತ್ರಿ 11.59ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ 6.1ರಷ್ಟಿತ್ತು ಎಂದು ಯೂರೋಪಿಯನ್ ಮೆಡಿಟರೇನಿಯನ್ ಭೂಕಂಪ ಮಾಪನ ಕೇಂದ್ರ ಸ್ಪಷ್ಟಪಡಿಸಿದೆ

ಚೀನಾದ ಲಕ್ಷ್ಮೀಹು ಪಟ್ಟಣದಿಂದ ವಾಯವ್ಯಕ್ಕೆ 102 ಕಿಲೋಮೀಟರ್ ದೂರದಲ್ಲಿ: ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಇಎಂಎಸ್ ಸಿ ವಿವರಿಸಿದೆ. ಚೀನಾದ ವಿಕೋಪ ತಡೆ ಮತ್ತು ಪರಿಹಾರಗಳ ರಾಷ್ಟ್ರೀಯ ಆಯೋಗ, ತುರ್ತು ನಿರ್ವಹಣೆ ಸಚಿವಾಲಯ 4ನೇ ಹಂತದ ತುರ್ತು ವಿಕೋಪ ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಕ್ಸಿನ್ನುವಾ ಹೇಳಿದೆ.

ಈಗಾಗಲೇ ನಿಯೋಜಿತವಾಗಿರುವ ಕಾರ್ಯಪಡೆ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಈ ವಿಕೋಪದ ಪರಿಣಾಮವನ್ನು ಅಂದಾಜಿಸುತ್ತಿದ್ದು, ಸ್ಥಳೀಯ ಪರಿಹಾರ ಕಾರ್ಯಾಚರಣೆಗಳಿಗೆ ಮಾರ್ಗದರ್ಶನ ನೀಡುತ್ತಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ