Mysore
27
scattered clouds
Light
Dark

ಯುವ ಹಾಗೂ ವಿನಯ್‌ ತಲೆ ಬಗ್ಗಿಸಿಕೊಂಡು ನಡೆಯಬೇಕು: ರಾಘವೇಂದ್ರ ರಾಜ್‌ ಕುಮಾರ್‌

ಬೆಂಗಳೂರು: ಎಲ್ಲರಂತೆ ನಮಗೂ ಕಷ್ಟ ಬರುತ್ತದೆ, ಯುವ ಹಾಗೂ ವಿನಯ್‌ ತಲೆ ಬಗ್ಗಿಸಿಕೊಂಡು ನಡೆಯಬೇಕು ಎಂದು ನಟ ರಾಘವೇಂದ್ರ ರಾಜ್‌ ಕುಮಾರ್‌ ಹೇಳಿದ್ದಾರೆ.

ಈ ಬಗ್ಗೆ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಅಭಿಮಾನಿಗಳು ನನ್ನ ಮಕ್ಕಳಿಗೆ ಇಷ್ಟೊಂದು ಯಶಸ್ಸು ಕೊಡುತ್ತಿದ್ದಾರೆ ಅಂತ ಅಂದುಕೊಂಡಿರಲಿಲ್ಲ. ಒಬ್ಬ ತಂದೆಯಾಗಿ ಇದಕ್ಕಿಂತ ಬೇರೆ ಸಂತೋಷ ಬೇಡ. ಅಭಿಮಾನಿಗಳ ಪ್ರೀತಿಯನ್ನು ನಮ್ಮ ಕುಟುಂಬದವರು ತಲೆ ಬಗ್ಗಿಸಿಕೊಂಡು ಕಾಪಾಡಿಕೊಂಡು ನಡೆಯಬೇಕು ಎಂದರು.

ವಿನಯ್‌ ಹಾಗೂ ಯುವ ಕಷ್ಟ ಪಟ್ಟು ತಲೆ ಬಗ್ಗಿಸಿಕೊಂಡು ಮುಂದೆ ನಡೆಯಬೇಕು. ಪ್ರತಿಯೊಂದು ಕೆಲಸದಲ್ಲಿ ಚಾಲೆಂಜ್‌ ಇರುತ್ತದೆ. ಯಾವುದನ್ನೂ ಸುಮ್ಮನೆ ಸಂಪಾದನೆ ಮಾಡಲು ಆಗುವುದಿಲ್ಲ. ಅಭಿಮಾನಿಗಳೇ ನಮಗೆ ಶಕ್ತಿ ಹಾಗೂ ಪ್ರೋತ್ಸಾಹ ಎಂದು ರಾಘವೇಂದ್ರ ರಾಜ್‌ ಕುಮಾರ್‌ ಹೇಳಿದ್ದಾರೆ.

ಕಷ್ಟ-ಸುಖ ಅನ್ನೋದು ಎಲ್ಲರಿಗೂ ಬರುತ್ತದೆ. ಹಾಗೆಯೇ ನಮಗೂ ಬರುತ್ತದೆ. ಆದರೆ ಏನೇ ಬಂದರೂ ನಾವು ಧೈರ್ಯವಾಗಿ ಎದುರಿಸಬೇಕು ಎಂದು ಕಿವಿಮಾತು ಹೇಳಿದರು.