Mysore
23
overcast clouds

Social Media

ಶನಿವಾರ, 16 ಮೇ 2026
Light
Dark

ಯಾರ ಮುಂದೆಯೂ ನಾವು ಕಡಿಮೆ ಎಂಬ ಭಾವನೆ ಬೇಡ: ಯಶ್‍

ಮೊದಲು ಅಪ್‍ಗ್ರೇಡ್‍ ಆಗಬೇಕು. ಚೆನ್ನಾಗಿ ಕೆಲಸ ಕಲಿಯಬೇಕು. ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು. ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಯಾರ ಮುಂದೆಯೇ ನಾವು ಕಡಿಮೆ ಎಂಬ ಯೋಚನೆ ಇರಬಾರದು. ಬೇರೆಯವರೆಲ್ಲರೂ ನಮಗೆ ಗೌರವ ಕೊಡುವಂತೆ ದುಡಿಯಬೇಕು ಎಂದು ನಟ ಯಶ್‌ ಹೇಳಿದ್ದಾರೆ.

ಯೋಗರಾಜ್‍ ಭಟ್‍ ನಿರ್ದೇಶನದ ‘ಮನದ ಕಡಲು’ ಚಿತ್ರವು ಮಾರ್ಚ್.28ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಯಶ್‍ ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.

‘ದೊಡ್ಡ ಸ್ಟಾರ್‍ ನಟರು ತಮ್ಮ ಚಿತ್ರಗಳನ್ನು ಪ್ರಚಾರ ಮಾಡಿದರೆ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ಹಾಗಾಗಿ, ಬಹಳಷ್ಟು ಜನ ತಮ್ಮ ಚಿತ್ರಗಳ ಪೋಸ್ಟರ್, ಟೀಸರ್‍, ಟ್ರೇಲರ್‌ಗಳನ್ನು ದೊಡ್ಡ ನಟರಿಂದ ಬಿಡುಗಡೆ ಮಾಡಿಸುವುದಕ್ಕೆ ಮುಂದಾಗುತ್ತಿದ್ದಾರೆ. ಆದರೆ, ನಾವು ಬರುವುದರಿಂದ ಚಿತ್ರ ಗೆಲ್ಲುವುದು, ಚಿತ್ರ ಗೆಲ್ಲೋದು ನಿಮ್ಮ ಕೆಲಸಗಳಿಂದ ಎಂದು ಯಶ್‍ ಹೇಳಿದ್ದಾರೆ.

ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಸಿನಿಮಾಗಳನ್ನು ಹರಸುತ್ತಾರೆ ಎಂದ ಯಶ್‍, ‘ಹಿಂದೆ ನಾನು ಸಹ ಸಂದರ್ಶನವೊಂದರಲ್ಲಿ ಜನ ಬೇರೆ ಭಾಷೆ ಸಿನಿಮಾಗಳನ್ನೇ ನೋಡುತ್ತಾರೆ ಎಂದು ದೂರಿದ್ದೆ. ಮೊದಲು ನಮ್ಮ ಕೆಲಸವನ್ನು ನಾವು ಸರಿ ಮಾಡಿಕೊಂಡು, ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಕನ್ನಡಿಗರು ಯಾವತ್ತೂ ನಮ್ಮ ಕೈ ಬಿಟ್ಟಿಲ್ಲ. ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಸಿನಿಮಾಗಳನ್ನು ಹರಸುತ್ತಾರೆ’ ಎಂದರು.

ಬರೀ ನಟನೆಯಷ್ಟೇ ಸಿನಿಮಾ ಅಲ್ಲ, ಬೇರೆ ವಿಷಯಗಳ ಬಗ್ಗೆಯೂ ಗಮನಹರಿಸಬೇಕು ಎಂದ ಯಶ್, ‘ವೃತ್ತಿ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು, ಟ್ರೆಂಡ್‍ ಹೇಗಿದೆ, ಜವಾಬ್ದಾರಿ ಏನು ಎಂಬುದನ್ನು ತಿಳಿದುಕೊಂಡು ಬರಬೇಕು’ ಎಂದರು.

Tags:
error: Content is protected !!