Mysore
35
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ವಯನಾಡು ಭೂಕುಸಿತ ದುರಂತ ಪ್ರಕರಣ: 2 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್‌

ವಯನಾಡು: ಕೇರಳದ ವಯನಾಡು ಭೂಕುಸಿತ ದುರಂತ ಪ್ರಕರಣದಲ್ಲಿ ಸಂಕಷ್ಟದಲ್ಲಿರುವ ಸಂತ್ರಸ್ತರ ಸಹಾಯಕ್ಕೆ ಡಾರ್ಲಿಂಗ್‌ ಪ್ರಭಾಸ್‌ ನೆರವಾಗಿದ್ದಾರೆ.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 400ಕ್ಕೆ ದಾಟಿದ್ದು, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಡಾರ್ಲಿಂಗ್‌ ಪ್ರಭಾಸ್‌ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಕೇರಳ ಸಿಎಂ ಪರಿಹಾರ ನಿಧಿಗೆ 2 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ನಟ ಪ್ರಭಾಸ್‌ ಮಾನವೀಯತೆ ಮೆರೆದಿದ್ದಾರೆ.

ವಯನಾಡು ಭೂಕುಸಿತ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಸೂರ್ಯ ದಂಪತಿ, ರಶ್ಮಿಕಾ ಮಂದಣ್ಣ, ಮೆಗಾಸ್ಟಾರ್‌ ಚಿರಂಜೀವಿ, ಅಲ್ಲು ಅರ್ಜುನ್‌ ಸೇರಿದಂತೆ ಹಲವರು ದೇಣಿಗೆ ನೀಡಿದ್ದರು. ಈಗ ಡಾರ್ಲಿಂಗ್‌ ಪ್ರಭಾಸ್‌ 2 ಕೋಟಿ ದೇಣಿಗೆ ನೀಡಿದ್ದು, ಸಂತ್ರಸ್ತರ ಬಾಳಿಗೆ ಬೆಳಕಾಗಿದ್ದಾರೆ.

ಇನ್ನು ವಯನಾಡು ದುರಂತದಲ್ಲಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಕಾರ್ಯಾಚರಣೆಗೆ ಪದೇ ಪದೇ ಮಳೆಯೂ ಕೂಡ ಅಡ್ಡಿಪಡಿಸುತ್ತಿದೆ.

ಆದರೂ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಶವಗಳು ಪತ್ತೆಯಾಗುತ್ತಲೇ ಇವೆ.

Tags: