Mysore
26
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಲಿವ್‍-ಇನ್‍ ಸಂಬಂಧದ ಕುರಿತ ‘ಪ್ರೇಮಿಗಳ ಗಮನಕ್ಕೆ’ ಟ್ರೇಲರ್ ಬಿಡುಗಡೆ

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮದುವೆಯಾಗದೆ ಒಟ್ಟಿಗೆ ವಾಸಿಸುವ ಗಂಡು-ಹೆಣ್ಣಿನ ಸಂಖ್ಯೆ ಜಾಸ್ತಿಯಾಗುತ್ತಿವೆ. ಈ ಲಿವ್‍-ಇನ್‍ ಸಂಬಂಧದ ಕುರಿತು ಕೆಲವು ಚಿತ್ರಗಳು ಸಹ ಬಂದಿವೆ. ಆ ಸಾಲಿಗೆ ಇದೀಗ ‘ಪ್ರೇಮಿಗಳ ಗಮನಕ್ಕೆ’ ಸಹ ಸೇರಿದೆ.

ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಲಿವ್‍-ಇನ್‍ ಸಂಬಂಧದಲ್ಲಿದ್ದ ಇಬ್ಬರು ಪ್ರೇಮಿಗಳ ಸುತ್ತ ನಡೆಯುವ ಕಥೆ ಇರುವ ‘ಪ್ರೇಮಿಗಳ ಗಮನಕ್ಕೆ’ ಚಿತ್ರವನ್ನು ಸಿಟಾಡಿಲ್ ಫಿಲಂಸ್ ಹಾಗೂ ಜೊಯಿಟಾ ಎಂಟರ್‌ಟೈನ್‌ಮೆಂಟ್ಸ್ ಅಡಿ ಸುಬ್ಬು ಹಾಗೂ ಯಕ್ಕಂಟಿ ರಾಜಶೇಖರ ರೆಡ್ಡಿ ಜೊತೆಯಾಗಿ ನಿರ್ಮಿಸಿದ್ದಾರೆ. ವಿನ್ಸೆಂಟ್ ಇನ್ಬರಾಜ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ‘ಬಿಗ್‍ ಬಾಸ್‍’ ಖ್ಯಾತಿಯ ಶಶಿ ಮತ್ತು ಚಿರಶ್ರೀ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಇದನ್ನು ಓದಿ : ನಿಜಜೀವನದ ದಂಪತಿಯೇ ನಾಯಕ-ನಾಯಕಿ: ಶರಧಿ ಕಿರುಚಿತ್ರ ಬಿಡುಗಡೆ

ಐದು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಒಂದು ನೈಜ ಘಟನೆ ಈ ಚಿತ್ರಕ್ಕೆ ಪ್ರೇರಣೆ ಎನ್ನುವ ನಿರ್ದೇಶಕ ವಿನ್ಸೆಂಟ್‍, ‘ಇಡೀ ಚಿತ್ರದ ಕಥೆ ನಡೆಯೋದು ಒಂದೇ ಮನೆಯಲ್ಲಿ ಮತ್ತು ಎರಡು ಪಾತ್ರಗಳ ಸುತ್ತ. ಮತ್ತೊಂದು ಪಾತ್ರ ಕೆಲವು ದೃಶ್ಯಗಳಲ್ಲಿ ಮಾತ್ರ ಬಂದುಹೋಗುತ್ತದೆ. ಮನರಂಜನೆಯ ಜೊತೆಗೆ ಜಾಗೃತಿ ಮೂಡಿಸುವ ಅಂಶಗಳನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ’ ಎಂದರು.

ಶಶಿಕುಮಾರ್ ಅವರಿಗೆ ಇದು ಮೂರನೆಯ ಚಿತ್ರವಂತೆ. ಈಗಿನ ಕಾಲದ ತಲೆಮಾರಿನವರಿಗೆ ಈ ಕಥೆ ಹೆಚ್ಚು ಕನೆಕ್ಟ್ ಆಗುತ್ತೆ ಎಂದರು. ನಾಯಕಿ ಚಿರಶ್ರೀ ಈ ಚಿತ್ರದಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ದರ್ಶಿನಿ ಎಂಬ ಪಾತ್ರ ಮಾಡಿರುವುದಾಗಿ ಹೇಳಿದರು. ಅರುಳ್ ಸೆಲ್ವನ್ ಅವರ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಅವರ ಸಂಗೀತ ಈ ಚಿತ್ರಕ್ಕಿದೆ.

Tags:
error: Content is protected !!