Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಸುದೀಪ್‍ ಸೋದರಳಿಯ ಸಂಚಿತ್‍ ಅಭಿನಯದ ‘ಮ್ಯಾಂಗೋ ಪಚ್ಚ’ ಚಿತ್ರದ ಟೀಸರ್ ಬಂತು

ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ ‘ಮ್ಯಾಂಗೋ ಪಚ್ಚ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಂಚಿತ್ ಚೊಚ್ಚಲ ಸಿನಿಮಾದ ಟೀಸರ್ ಅನ್ನು ಸುದೀಪ್ ಅವರೇ ಬಿಡುಗಡೆ ಮಾಡಿದ್ದಾರೆ.

‘ಮ್ಯಾಂಗೋ ಪಚ್ಚ’ ಮೈಸೂರು ಭಾಗದ ಕಥೆ. ಈ ದಸರ ಸಂಭ್ರಮದಲ್ಲೇ ಮೈಸೂರು ಭಾಗದ ಕಥೆಯ ಟೀಸರ್‍ ಬಿಡುಗಡೆ ಆಗಿರುವುದು ವಿಶೇಷ.

‘ನಮ್ದು ಮೈಸೂರು. ರಾಜರಿದ್ದ ಊರು. ಊರಲ್ಲಿ ರಾಜರಿದ್ದ ಮೇಲೆ ಸೈನಿಕರು ಸಹ ಇರಬೇಕಲ್ವಾ?’ ಎಂದು ನಾಯಕ ಆಡುವ ಮಾತಿನಿಂದ ಟೀಸರ್‍ ಪ್ರಾರಂಭವಾಗುತ್ತದೆ. ಇಲ್ಲಿ ನಾಯಕನ ಹೆಸರು ಪ್ರಶಾಂತ್‍. ಎಲ್ಲರೂ ಪಚ್ಚ ಎಂದು ಕರೆಯುತ್ತಿರುತ್ತಾರೆ. ಇಂಥ ಪಚ್ಚ, ‘ಮ್ಯಾಂಗೋ ಪಚ್ಚ’ ಆಗುವುದು ಹೇಗೆ ಎಂಬುದರ ಸುತ್ತ ಚಿತ್ರ ಸುತ್ತುತ್ತದೆ. ಇದು ಮೈಸೂರಿನ ಕಥೆ. ರಾಜನ ವಿರುದ್ಧ ಸೈನಿಕ ಹೇಗೆ ತಿರುಗಿಬಿದ್ದ ಎಂಬುದರ ಸುತ್ತ ಈ ಚಿತ್ರ ಸುತ್ತುತ್ತದೆ.

‘ಮ್ಯಾಂಗೋ ಪಚ್ಚ’ ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ. ಪಕ್ಕ ಮಾಸ್ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಇದಾಗಿದ್ದು, 2001ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ.

ಇದನ್ನೂ ಓದಿ:-ಭಾಲ್ಕಿಯಲ್ಲಿ ಮುಂದಿನ ವರ್ಷದಿಂದ ವಚನ ವಿಶ್ವವಿದ್ಯಾಲಯ ಆರಂಭ: ಸಿಎಂ ಸಿದ್ದರಾಮಯ್ಯ

‘ಮ್ಯಾಂಗೋ ಪಚ್ಚ’ ಚಿತ್ರವನ್ನು KRG ಸ್ಟುಡಿಯೋಸ್‍ ಮತ್ತು ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಇನ್ನು, ಈ ಚಿತ್ರಕ್ಕೆ ವಿವೇಕ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಸಂಚಿ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ, ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜಯ್, ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣವಿದೆ.

Tags:
error: Content is protected !!