ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ದಿ ರಾಜಾಸಾಬ್’ ಚಿತ್ರವು ಮತ್ತೊಮ್ಮೆ ಮುಂದಕ್ಕೆ ಹೋಗಿದೆ. ಇದಕ್ಕೂ ಮೊದಲು ಚಿತ್ರವು ಡಿಸೆಂಬರ್.05ರಂದು ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಈಗ ಚಿತ್ರವು ಒಂದು ತಿಂಗಳು ಮುಂದಕ್ಕೆ ಹೋಗಿದ್ದು, 2026ರ ಜನವರಿ.09ರಂದು ಬಿಡುಗಡೆಯಾಗಲಿದೆ.
ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಹಾರರ್ ಕಾಮಿಡಿ ಶೈಲಿಯ ಈ ಚಿತ್ರವು ಭಾರತದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಎಂದು ಬಿಂಬಿತವಾಗಿದೆ. ‘ದಿ ರಾಜಸಾಬ್’ ಚಿತ್ರಕ್ಕಾಗಿ ಹೈದರಾಬಾದ್‍ನಲ್ಲಿ ಬೃಹತ್ ಬಂಗಲೆಯ ಸೆಟ್ ನಿರ್ಮಿಸಲಾಗಿದ್ದು, ಆ ಸೆಟ್‍ನಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.
ಇದನ್ನು ಓದು: ಸೆಟ್ಟೇರಿತು ಶ್ರೀಮುರಳಿ ಅಭಿನಯದ ಹೊಸ ಚಿತ್ರ ‘ಪರಾಕ್’
ಸಿನಿಮಾ ಬಿಡುಗಡೆಗೆ ಸುಮಾರು ಮೂರು ತಿಂಗಳ ಮುಂಚೆಯೇ ಮೂರು ನಿಮಿಷಗಳಿಗಿಂತ ಹೆಚ್ಚಿನ ಅವಧಿಯ ಟ್ರೇಲರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಚಿತ್ರದಲ್ಲೇನಿರಬಹುದು ಎಂದು ಹಿಂಟ್ ನೀಡಿದೆ. ಟ್ರೈಲರ್ ಬಿಡುಗಡೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ 105 ಚಿತ್ರಮಂದಿರಗಳಲ್ಲಿ ಸಾಮೂಹಿಕ ಪ್ರದರ್ಶನಗಳೊಂದಿಗೆ ಬಿಡುಗಡೆ ಮಾಡಲಾಯಿತು.
‘ದಿ ರಾಜಾಸಾಬ್’ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಸಂಜಯ್ ದತ್, ಬೋಮನ್ ಇರಾನಿ, ಜರೀನಾ ವಹಾಬ್, ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿಧಿ ಕುಮಾರ್ ನಟಿಸಿದ್ದಾರೆ. ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್, ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಥಮನ್ ಸಂಗೀತ ನೀಡಿದ್ದಾರೆ





