Mysore
25
overcast clouds

Social Media

ಭಾನುವಾರ, 17 ಮೇ 2026
Light
Dark

ಬೆಂಜಮಿನ್‌ ನೆತನ್ಯಾಹು ಕ್ಷೇಮವಾಗಿದ್ದಾರೆ: ಇಸ್ರೇಲ್‌ ಪ್ರಧಾನಿ ಕಚೇರಿ ಸ್ಪಷ್ಟನೆ

ಜೆರುಸೇಲಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕ್ಷೇಮವಾಗಿದ್ದಾರೆ. ಅವರು ಸಾವನ್ನಪ್ಪಿದ್ದಾರೆ ಎಂಬ ವರದಿ ಸುಳ್ಳು ಎಂದು ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದೆ.

ಆನ್‌ಲೈನ್‌ ಪೋಸ್ಟ್‌ಗಳು ಹಾಗೂ ವಿಡಿಯೋಗಳು ಹರಿದಾಡುತ್ತಿರುವ ನಡುವೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಹತ್ಯೆ ಮಾಡಲಾಗಿದೆಯೇ ಎಂಬ ಊಹಾಪೋಹಗಳು ಹೆಚ್ಚಾದವು.

ನೆತನ್ಯಾಹು ಅವರ ಒಂದು ಕೈಯಲ್ಲಿ ಆರು ಬೆರಳುಗಳನ್ನು ಹೊಂದಿರುವಂತೆ ಕೆಲವು ಬಳಕೆದಾರರು ಹೇಳಿಕೊಂಡ ವೀಡಿಯೋದ ನಂತರ ಅವರ X ಖಾತೆಯಲ್ಲಿ ವದಂತಿಗಳು ಪ್ರಾರಂಭವಾದವು.

ಈ ಬಗ್ಗೆ ಸ್ಪಷ್ಟನೆ ನೀಡಿದ ಇಸ್ರೇಲ್‌ ಪ್ರಧಾನಿ ಕಚೇರಿಯು, ಈ ಎಲ್ಲಾ ವರದಿಗಳು ಸುಳ್ಳು ಸುದ್ದಿ. ಪ್ರಧಾನಮಂತ್ರಿ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

Tags:
error: Content is protected !!