ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸ್ಟಾರ್ ವಾರ್ ಶುರುವಾಗಿದೆ. ಕಿಚ್ಚ ಸುದೀಪ್ ನೀಡಿದ ಆ ಒಂದು ಹೇಳಿಕೆಯಿಂದ ಡಿ ಬಾಸ್ ಅಭಿಮಾನಿಗಳು ಸಿಡಿದೆದ್ದಿದ್ದಾರೆ.
ನಟ ದರ್ಶನ್ ಆಪ್ತ ಧನ್ವೀರ್ ಗೌಡ ಕೂಡ ಸುದೀಪ್ ಹೆಸರು ಹೇಳದೇ ಟಾಂಗ್ ನೀಡಿದ್ದಾರೆ.
ಇದನ್ನು ಓದಿ: ಕಿಚ್ಚ ಸುದೀಪ್ ಯುದ್ಧದ ಮಾತಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಟಾಂಗ್
ಕಾಡಿನಲ್ಲಿ ಎಲ್ಲಾ ಪ್ರಾಣಿ ಇರುತ್ತದೆ. ಆದರೆ ಸಿಂಹಾನೇ ರಾಜ ಎಂದು ಹೇಳುವ ಮೂಲಕ ಸುದೀಪ್‌ಗೆ ಧನ್ವೀರ್ ಗೌಡ ಟಾಂಗ್ ನೀಡಿದ್ದಾರೆ.
ಧನ್ವೀರ್ ಗೌಡ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಜೊತೆಗಿನ ಒಂದು ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ತಮಿಳು ನಟ ವಿಜಯ್ ಭಾಷಣದ ತುಣುಕೊಂದನ್ನು ಹಂಚಿಕೊಂಡು ಸುದೀಪ್‌ಗೆ ಟಾಂಗ್ ನೀಡಿದ್ದಾರೆ.





