Mysore
20
few clouds

Social Media

ಶನಿವಾರ, 24 ಜನವರಿ 2026
Light
Dark

ತೆಲುಗಿನ ಸೂಪರ್ ಸ್ಟಾರ್ ಸೂರ್ಯ ಕುಮಾರ್ ಆದ ಉಪೇಂದ್ರ

ಉಪೇಂದ್ರ ಅಭಿನಯದ ‘45’ ಚಿತ್ರ ಡಿ.25ರಂದು ಬಿಡುಗಡೆಯಾಗುತ್ತಿದೆ. ‘ರಕ್ತ ಕಾಶ್ಮೀರ’ ಚಿತ್ರವು ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಉಪೇಂದ್ರ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗಲಿದೆ. ಅದೇ ‘ಆಂಧ್ರ ಕಿಂಗ್ ತಾಲೂಕ’.

‘UI’ ನಂತರ ಉಪೇಂದ್ರ ಒಪ್ಪಿಕೊಂಡ ಚಿತ್ರ ‘ಆಂಧ್ರ ಕಿಂಗ್ ತಾಲೂಕ’. ಈ ಚಿತ್ರವು ನವೆಂಬರ್‍ 27ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಕನ್ನಡದ ಟ್ರೇಲರ್‍ ಬಿಡುಗಡೆಯಾಗಿದೆ. ಸಿನಿಮಾನಲ್ಲಿ ತೆಲುಗು ನಟ ರಾಮ್ ಪೋತಿನೇನಿ ಮತ್ತು ಉಪೇಂದ್ರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ಸಾಥ್ ಕೊಟ್ಟಿದ್ದಾರೆ.

ಸಿನಿಮಾನಲ್ಲಿ ಉಪೇಂದ್ರ ಸ್ಟಾರ್ ಹೀರೋ ಆಗಿ ನಟಿಸಿದ್ದಾರೆ. ಅವರ ಅಪ್ಪಟ ಅಭಿಮಾನಿಯ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸಿದ್ದಾರೆ. ಇದು ಅಭಿಮಾನಿ ಮತ್ತು ಸ್ಟಾರ್ ಹೀರೋ ನಡೆಯುವ ಕಥೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸಿದೆ.

ಈ ಚಿತ್ರದ ಕುರಿತು ಮಾತನಾಡಿದ ಉಪೇಂದ್ರ, ‘ಎಲ್ಲಾ ಸಿನಿಮಾ ಮಾಡೋದಿಕ್ಕೆ ಒಂದೊಂದು ಕಾರಣ ಇರುತ್ತದೆ. ಕಥೆ, ಸಂದೇಶ, ಚಿತ್ರಕಥೆ, ನಮಗೆ ಸಿಗುವ ಸ್ಕೋಪ್ ಇದೆಲ್ಲಾ ಕಾರಣ. ಆದರೆ, ಈ ಸಿನಿಮಾ ಮಾಡಿರುವುದು ಅಭಿಮಾನಿಗಳಿಗೋಸ್ಕರ. ಈ ಚಿತ್ರ ನೋಡಿ ಅಭಿಮಾನಿಗಳು ಎಂಜಾಯ್ ಮಾಡುತ್ತಾರೆ. ನಾನು ಚಿತ್ರ ನೋಡಿ ಮಾತನಾಡುತ್ತೇನೆ’ ಎನ್ನುತ್ತಾರೆ.

Tags:
error: Content is protected !!