ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಸುದೀಪ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಆದರೆ, ಫ್ಯಾನ್ ವಾರ್ ಮಾತ್ರ ಇನ್ನೂ ನಡೆಯುತ್ತಲೇ ಇದೆ.
ಈ ಬಗ್ಗೆ ನಟಿ ರಕ್ಷಿತಾ ಪ್ರೇಮ್ ಇದೀಗ ಮಾಧ್ಯಮಗಳಿಗೆ ರಿಯಾಕ್ಟ್ ಮಾಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಮೂರು ಸ್ಟಾರ್‌ಗಳ ಸಿನಿಮಾ ರಿಲೀಸ್ ಆಗುತ್ತಿದೆ, “ನಮಗೆ ಅದೇ ಕ್ರಿಸ್ಮಸ್ ಆಗೋಗಿಬಿಟ್ಟಿದೆ ಈಗ. ʻಮಾರ್ಕ್ʼ ಮತ್ತು ʻ45’ ಸಿನಿಮಾಗೆ ಆಲ್ ದಿ ಬೆಸ್ಟ್. ಎರಡೂ ಸಿನಿಮಾ ತುಂಬಾ ದೊಡ್ಡ ಯಶಸ್ಸು ತಂದುಕೊಡಲಿ. ಜನ ಎರಡೂ ಸಿನಿಮಾವನ್ನ ಅಷ್ಟೇ ಪ್ರೀತಿಯಿಂದ ಒಪ್ಪಿಕೊಳ್ಳಲಿ” ಎಂದಿದ್ದಾರೆ.
ಇನ್ನೂ ಸ್ಟಾರ್ ವಾರ್, ಫ್ಯಾನ್ ವಾರ್ ಬಗ್ಗೆ ಮಾತನಾಡಿದ ಅವರು, “ನಿನ್ನೆ ನಾನು ಸುದೀಪ್ ಅವರ ಇಂಟರ್ವ್ಯೂ ನೋಡ್ತಿದ್ದೆ, ಅವರು ಹೇಳ್ತಿದ್ರು ʻನಾನು ದರ್ಶನ್ ಅವರು ಯಾವಾತ್ತಾದ್ರೂ ಮೈಕ್ ಹಿಡ್ಕೊಂಡು ಜಗಳ ಆಡಿದ್ದೀವಾ?ʼ ಅಲ್ಲೇ ಮುಗಿದು ಹೋಯ್ತು ಅನಿಸುತ್ತೆ. ಅವರ ಉತ್ತರವನ್ನ ಅವರು ನೀಡಿದ್ದಾರೆ. ಸುದೀಪ್ ಅವರು ತುಂಬಾ ಕ್ಲಿಯರ್ ಆಗಿ ಹೇಳಿದ್ದಾರೆ, ಆ ತರಹ ಏನು ಇಲ್ಲ ಅಂತ. ನಾವು ಜಗಳ ಮಾಡ್ತಿರೋದು ಒಂದೇ, ಒಬ್ಬರ ಜೊತೆ ಒಬ್ಬರು ಜಗಳ ಆಡ್ತಾ ಇಲ್ಲ. ನಾವೆಲ್ಲಾ ಪೈರಸಿ ವಿರುದ್ಧ ಫೈಟ್ ಮಾಡುತ್ತಿದ್ದೇವೆ. ಅದಂತೂ ಖಂಡಿತ ಎಂದರು.
ಇದನ್ನೂ ಓದಿ:-ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್
ಇಂಡಸ್ಟ್ರೀಯಲ್ಲಿ ಸುದೀಪ್ ನನ್ನ ಮೊದಲ ಫ್ರೆಂಡ್ ದರ್ಶನ್ ಹಾಗೂ ಸುದೀಪ್ ಕೂಡ ಸ್ನೇಹಿತರೇ. ಪೈರಸಿ ನಮ್ಮ ದೊಡ್ಡ ಶತ್ರು ಆದರೆ, ತಪ್ಪು ತಿಳುವಳಿಕೆ ಕೂಡ ದೊಡ್ಡ ಶತ್ರು. ಅವರೇ ತಮ್ಮ ಪರವಾಗಿ ಮಾತನಾಡಲಿ. ತಪ್ಪು ತಿಳುವಳಿಕೆ ಪಕ್ಕಕ್ಕಿಟ್ಟು, 45 ಹಾಗೂ ಮಾರ್ಕ್ ಚಿತ್ರಕ್ಕೆ ವಿಶ್ ಮಾಡೋಣ. ಆ ತರಹ ಏನೂ ಇಲ್ಲ ಅಂತ ಅವರೇ ಕ್ಲಿಯರ್ ಆಗಿ ಹೇಳಿದ್ದಾರೆ. ಅವರೇ ಹಾಗೆ ಹೇಳಿದ್ಮೇಲೆ ನಾನು ಹೇಳೋದು ತಪ್ಪಾಗುತ್ತದೆ ಎಂದರು ರಕ್ಷಿತಾ ಪ್ರೇಮ್.




