Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ರೌಡಿಸಂ‌ ಕಥೆ ಹೇಳಲು ಶ್ರೀಜೈ ರೆಡಿ; ಸಂದೀಪ್‍ ಅಭಿನಯದಲ್ಲಿ ಹೊಸ ಚಿತ್ರ

ಕಳೆದ ವರ್ಷ, ರಾಧಿಕಾ ಕುಮಾರಸ್ವಾಮಿ ಅಭಿನಯದ ಮತ್ತು ನಿರ್ಮಾಣದ ‘ಭೈರಾದೇವಿ’ ಎಂಬ ಚಿತ್ರ ಬಿಡುಗಡೆಯಾಗಿದ್ದು ನೆನಪಿರಬಹುದು. ದೊಡ್ಡ ಪ್ರಚಾರದೊಂದಿಗೆ ಶುರುವಾದ ಈ ಚಿತ್ರ, ಬಿಡುಗಡೆಯ ನಂತರ ಹೆಚ್ಚು ಸದ್ದು ಮಾಡಲಿಲ್ಲ. ಆ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀಜೈ, ಇದೀಗ ಸದ್ದಿಲ್ಲದೆ ಹೊಸ ಚಿತ್ರವೊಂದರ ಜೊತೆಗೆ ಬಂದಿದ್ದಾರೆ.

ಶ್ರೀಜೈ ಮೊದಲು ನಿರ್ದೇಶಿಸಿದ ಚಿತ್ರವೆಂದರೆ ಅದು ‘ದುನಿಯಾ’ ವಿಜಯ್‍ ಅಭಿನಯದ ‘RX ಸೂರಿ’. ಈ ಚಿತ್ರದ ನಂತರ ಅವರು ‘ಭೈರಾದೇವಿ’ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷದ ನಂತರ ಅವರು ಸಂದೀಪ್ ನಾಗರಾಜ್ ಅಭಿನಯದ ಹೊಸ ಚಿತ್ರವನ್ನು ನಿರ್ದೇಶಿಸಿಸುತ್ತಿದ್ದಾರೆ.

ಇದನ್ನು ಓಧಿ: ಸಾಮಾಜಿಕ ಕಾಳಜಿಯುಳ್ಳ ಸಿನಿಮಾ ಕಣ್ಮರೆ : ಸಿ.ಎಂ ವಿಷಾಧ

‘ಪ್ರೊಡಕ್ಷನ್ ನಂ.1’ ಎಂಬ ತಾತ್ಕಾಲಿಕ ಶೀರ್ಷಿಕೆ ಇಟ್ಟು, ಚಿತ್ರವನ್ನು ಘೋಷಣೆ ಮಾಡಲಾಗಿದ್ದು, ಇತ್ತೀಚಿಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್‌ ಪೂಜೆ ಸರಳವಾಗಿ ನೆರವೇರಿದೆ. ತಮ್ಮ ಮೊದಲ ಚಿತ್ರದಲ್ಲಿ ರೌಡಿಸಂ ಕಥೆಯನ್ನು ಹೇಳಿದ್ದ ಶ್ರೀಜೈ, ಈ ಬಾರಿಯೂ ಅಂಥದ್ದೇ ಕಥೆಯನ್ನು ತೆಗೆದುಕೊಂಡಿರುವ ಸಾಧ್ಯತೆ ಇದೆ ಎಂದು ಹೊಸ ಪೋಸ್ಟರ್‍ ಹೇಳುತ್ತದೆ. ಪೋಸ್ಟರ್‍ನಲ್ಲಿ ರಕ್ತ, ಮಚ್ಚು, ಹೆಣ, ಹಗ್ಗ ಎಲ್ಲವೂ ಇದ್ದು, ಇದೊಂದು ರೌಡಿಸಂ ಚಿತ್ರ ಇರಬಹುದು ಎಂಬ ಸುಳಿವು ನೀಡುತ್ತದೆ.

ಸಂದೀಪ್‍ ಈ ಹಿಂದೆ ‘ಅನಂತು vs ನುಸ್ರುತ್’, ‘ಪ್ರಭುತ್ವ’, ‘ಹಾಫ್‍ ಮೆಂಟ್ಲು’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಇದೀಗ ಶ್ರೀಜೈ ನಿರ್ದೇಶನದ ಹೊಸ ಚಿತ್ರದಲ್ಲಿ ಮಾಸ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಡ್ರೀಮ್ ವರ್ಲ್ಡ್ ಸಿನಿಮಾಸ್ ಹಾಗೂ ರಾಧಾಕೃಷ್ಣ ಆರ್ಟ್ಸ್ ಬ್ಯಾನರ್‌ನಡಿ ಈ ಹೊಸ ಚಿತ್ರ ನಿರ್ಮಾಣವಾಗಲಿದ್ದು, ಸೋಲೋಮನ್‍ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ಸೆಂಥಿಲ್ ಪ್ರಶಾಂತ್ ಸಂಗೀತ ಸಂಯೋಜಿಸುತ್ತಿದ್ದಾರೆ.

Tags:
error: Content is protected !!