Mysore
30
few clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಕಾರ್ತಿಕ್‍ ಮಹೇಶ್‍ ಅಭಿನಯದಲ್ಲಿ ‘ಸಿಂಪಲ್’ ಸುನಿ ಹೊಸ ಚಿತ್ರ

‘ಸಿಂಪಲ್‍’ ಸುನಿ ಅಭಿನಯದ ‘ಗತವವೈಭವ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಸುನಿ ತಿಳಿಸಿದ್ದಾರೆ. ಈ ಮಧ್ಯೆ, ‘ಬಿಗ್‍ ಬಾಸ್‍’ನ ಕಾರ್ತಿಕ್‍ ಮಹೇಶ್ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಪ್ರಾರಂಭಿಸುವುದಕ್ಕೆ ಸಜ್ಜಾಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ತಮ್ಮದೇ ಎ.ವಿ.ಆರ್ ಎಂಟರ್‍ಟೈನರ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಈ ಬ್ಯಾನರ್ ಅಡಿ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ.

ಈ ಪೈಕಿ ‘ಸಿಂಪಲ್‍’ ಸುನಿ ಮತ್ತು ಕಾರ್ತಿಕ್‍ ಮಹೇಶ್‍ ಚಿತರವೂ ಒಂದು. ಈ ಚಿತ್ರಕ್ಕೆ ‘ರಿಚಿ ರಿಚ್’ ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರದಲ್ಲಿ ಕಾರ್ತಿಕ್‍, ರಿದ್ದೇಶ್ ಚಿನ್ನಯ್ಯ ಎಂಬ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಕೌಟಂಬಿಕ ಜೊತೆಗೆ ಎಮೋಷನಲ್ ಅಂಶಗಳನ್ನು ಸೇರಿಸಿ ಸುನಿ ಕಥೆ ಬರೆದಿದ್ದಾರೆ. ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಮತ್ತು ಅಭಿಲಾಷ್ ಕಳತ್ತಿ ಛಾಯಾಗ್ರಹಣವಿರಲಿದೆ.

AVR Entertainers ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಎರಡನೇ ಸಿನಿಮಾಗೆ ಸುಜಯ್ ಶಾಸ್ತ್ರಿ ನಿರ್ದೇಶಕರು. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರಗಳನ್ನು ನಿರ್ದೇಶಿಸಿರುವ ಸುಜಯ್ ಈ ಬಾರಿ ಕ್ರೀಡಾ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ‘8’ ಹೆಸರಿನ ಈ ಚಿತ್ರಕ್ಕೆ ಪುಟ್ಭಲ್ ಹಿನ್ನೆಲೆಯ ಕಥೆ ಇದೆ. ಈ ಚಿತ್ರದ ನಾಯಕ ಯಾರು? ಅನ್ನೋದನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ಟೀಂ ರೆಡಿ ಇದೆ. ಕೋಚ್ ಯಾರು ಅನ್ನೋದನ್ನು ಸ್ಪಲ್ಪ ದಿನದಲ್ಲೇ ಹೇಳೋದಾಗಿ ಚಿತ್ರತಂಡ ತಿಳಿಸಿದೆ.

‘ರಿಚಿ ರಿಚ್‍’ ಮತ್ತು ‘8’ ಚಿತ್ರಗಳು ಸದ್ಯದಲ್ಲೇ ಪ್ರಾರಂಭವಾಗಲಿದೆ.

Tags: