Mysore
23
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

‘ಕೆಂಪು ಹಳದಿ ಹಸಿರು’; ಬದುಕು ಒಂಥರ ಟ್ರಾಫಿಕ್ ಸಿಗ್ನಲ್ ಇದ್ದಂತೆ

ಬದುಕನ್ನು ಹಲವು ನಿರ್ದೇಶಕರು ಹಲವು ವಿಷಯಗಳಿಗೆ ಹೋಲಿಸಿದ್ದಾರೆ. ಇದೀಗ ಪ್ರಸಾದ್‍ ಕುಮಾರ್‍ ನಾಯ್ಕ್ ಎನ್ನುವವರು ಬದುಕನ್ನು ಟ್ರಾಫಿಕ್‍ ಸಿಗ್ನಲ್‍ಗೆ ಹೋಲಿಸಿದ್ದಾರೆ. ಸಿಗ್ನಲ್‍ನಲ್ಲಿ ಇರುವ ಕೆಂಪು ಹಳದಿ ಮತ್ತು ಹಸಿರು ಬಣ್ಣಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತದೆ ಎಂದು ಅವರು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.

‘ಕೆಂಪು ಹಳದಿ ಹಸಿರು’ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು. ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಅಂಡ್ ಫಿಲಂಸ್ ಬ್ಯಾನರ್ ಮೂಲಕ ಪ್ರಸಾದ್‌ ಕುಮಾರ್ ನಾಯ್ಕ್ ನಿರ್ಮಿಸುತ್ತಿರುವ ಈ ಚಿತರವನ್ನು ಮಣಿ ಕಾರ್ತಿಕೇಯನ್‍ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಒಂದು ತುಳು ಚಿತ್ರವನ್ನು ನಿರ್ದೇಶನ ಮಾಡಿ ಅನುಭವವಿರುವ ಮಣಿ, ಇದೇ ಮೊದಲ ಬಾರಿಗೆ ಕನ್ನಡ ಚಿತ್ರನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ’ಸ್ಟಾಪ್, ಥಿಂಕ್ ಅಂಡ್ ಪ್ರೊಸೀಡ್ ಇನ್ ಲೈಫ್’ ಎಂಬ ಅರ್ಥಪೂರ್ಣ ಅಡಿಬರಹ ಇರಲಿದೆ.

ಟ್ರೇಲರ್‍ ಬಿಡುಗಡೆಯ ನಂತರ ಮಾತನಾಡಿದ ನಿರ್ದೇಶಕ ಮಣಿ, ‘ಹೆಸರೇ ಹೇಳುವಂತೆ, ಮೂರು ಬಣ್ಣಗಳು ಮೂರು ಪಾತ್ರಗಳ ಭಾವನೆಗಳನ್ನು ಹೇಳಲಾಗುತ್ತಿದೆ. ಇಲ್ಲೊಂದು ತ್ರಿಕೋನ ಪ್ರೇಮಕಥೆ ಇದ್ದು, ಇದರೊಂದು ಜೊತೆಗೆ ಇದೊಂದು ಸೆಸ್ಪೆನ್ಸ್ ಥ್ರಿಲ್ಲರ್ ಕಾಮಿಡಿ ಚಿತ್ರವಾಗಿರುತ್ತದೆ. ಮಂಗಳೂರು, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಿಸೆಂಬರ್ ಮೊದಲನೇ ವಾರದಲ್ಲಿ ತೆರೆಗೆ ತರಲು ಯೋಚನೆ ಇದೆ’ ಎಂದರು.

ಈ ಚಿತ್ರದಲ್ಲಿ ಶ್ರೀಹನ್‌ ದೀಪಕ್ ನಾಯಕನಾಗಿ ಅಭಿನಯಿಸಿದರೆ, ದಿವ್ಯಾ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್, ’ಒಂದು ಮೊಟ್ಟೆಯ ಕಥೆ’ಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಶೈಲಾಶ್ರೀ ಮುಲ್ಕಿ, ಚಿಂದೋಡಿ ವಿಜಯ್‌ಕುಮಾರ್, ಶ್ರೀಜನ್, ಮೀನಾಕ್ಷಿ ಹರ್ತಿ, ಮಾನಸ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಮಂಜುನಾಥ್‍ ನಾಯಕ್‍ ಛಾಯಾಗ್ರಹಣ ಮತ್ತು ಮುಂಬೈ ಮೂಲದ ವಿಕಾಶ್‍ ವಿಶ್ವಕರ್ಮ ಸಂಗೀತ ಸಂಯೋಜಿಸಿದ್ದಾರೆ.

Tags:
error: Content is protected !!