Mysore
27
overcast clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಅಮ್ಮನ ಹುಡುಕಾಟದ ಕಥೆ; ‘X&Y’ ಟ್ರೇಲರ್‌ ಬಿಡುಗಡೆ

ಸತ್ಯಪ್ರಕಾಶ್‍ ನಿರ್ದೇಶನದ, ನಿರ್ಮಾಣದ, ವಿತರಣೆಯ ಮತ್ತು ನಾಯಕತ್ವದ ‘X&Y’ ಚಿತ್ರವು ಜೂನ್‍.26ಕ್ಕೆ ಬಿಡುಗಡೆಯಾಗುತ್ತಿದೆ. ಬಿಡುಗಡೆ ಹತ್ತಿರ ಬರುತ್ತಿದ್ದಂತೆ ಚಿತ್ರತಂಡವು ಟ್ರೇಲರ್ ‍ಬಿಡುಗಡೆ ಮಾಡಿದೆ.

ಇದು ಸತ್ಯಪ್ರಕಾಶ್‍ ನಿರ್ದೇಶನದ ನಾಲ್ಕನೇ ಚಿತ್ರ. ‘ರಾಮಾ ರಾಮಾ ರೇ’, ‘ಒಂದಲ್ಲ ಎರಡಲ್ಲ’ ಮತ್ತು ‘ಮ್ಯಾನ್‍ ಆಫ್‍ ದಿ ಮ್ಯಾಚ್‍’ ಚಿತ್ರಗಳ ನಂತರ ಸತ್ಯ ಪ್ರಕಾಶ್‍, ಈ ಚಿತ್ರದಲ್ಲಿ ಗಂಭೀರ ವಿಷಯವನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಕೆಲವೇ ಪಾತ್ರಗಳ ಸುತ್ತ ಸುತ್ತುವ ಈ ಚಿತ್ರಕ್ಕಾಗಿ ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

ಈ ಚಿತ್ರದಲ್ಲಿ ಸತ್ಯಪ್ರಕಾಶ್‍ ಆಟೋ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘X&Y’ ಚಿತ್ರದ ಮೂಲಕ ತಂದೆ-ತಾಯಿ ಆಗಲು ಹೊರಟಿರುವ ಇವತ್ತಿನ ತಲೆಮಾರಿನವರ ಕಥೆ ಹೇಳುವುದಕ್ಕೆ ಹೊರಟಿದ್ದಾರೆ ಸತ್ಯ ಪ್ರಕಾಶ್‍. ತಮ್ಮ ಹಿಂದಿನ ಚಿತ್ರಗಳಂತೆ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ‘ಆಂಬು ಆಟೋ’ ಎಂಬ ಹೊಸ ಆಟೋ ಪರಿಚಯಿಸಲಾಗಿದೆ. ಈ ಆಟೋದ ವಿಶೇಷತೆ ಎಂದರೆ, ಆಂಬುಲೆನ್ಸ್‌ನಲ್ಲಿರುವಂತೆ ಎಲ್ಲ ಸೌಲಭ್ಯಗಳಿವೆ. ಈ ಆಟೋವನ್ನು ಚಿತ್ರದಲ್ಲಿ ಒಬ್ಬ ಕಲಾವಿದನಂತೆ ಕಲಾತ್ಮಕವಾಗಿ ಬಳಸಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ಈ ‘ಆಂಬು ಆಟೋ’ ಪ್ರಮುಖ ಪಾತ್ರವಹಿಸುತ್ತದೆಯಂತೆ.

‘X&Y’ ಚಿತ್ರಕ್ಕೆ ವಾಸುಕಿ ವೈಭವಿ ಸಂಗೀತ, ಲವಿತ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಛಾಯಾಗ್ರಹಣ ಮತ್ತು ಕೌಶಿಕ್ ಹರ್ಷ ಸಂಗೀತವಿದ್ದು, ಚಿತ್ರದಲ್ಲಿ ಸತ್ಯಪ್ರಕಾಶ್‍, ಬೃಂದಾ ಆಚಾರ್ಯ, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ, ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರು, ತೇನಪ್ಪನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Tags:
error: Content is protected !!