Mysore
15
scattered clouds

Social Media

ಬುಧವಾರ, 21 ಜನವರಿ 2026
Light
Dark

ಹಳೆ‌ಯ ಗರ್ಲ್ ಫ್ರೆಂಡ್‍ಗೆ ಪೃಥ್ವಿ ಅಂಬಾರ್ ಶುಭಾಶಯ: ಆಲ್ಬಂ ಸಾಂಗ್ ಬಿಡುಗಡೆ

ನಮ್ಮಲ್ಲಿ ಆಲ್ಬಂ ಹಾಡುಗಳ ಟ್ರೆಂಡ್ ಕಡಿಮೆ. ಅದರಲ್ಲೂ ಸಿನಿಮಾ ನಟ-ನಟಿಯರು ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಳ್ಳುವುದು ಇನ್ನೂ ಕಡಿಮೆಯೇ. ಹೀಗಿರುವಾಗ, ಸಿನಿಮಾ ನಟ-ನಟಿಯರು ಇಂತಹ ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಳ್ಳುವುದು ಇನ್ನೂ ವಿರಳವೇ. ಹೀಗಿರುವಾಗಲೇ ನಟ ಪೃಥ್ವಿ ಅಂಬಾರ್‍ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ಸದ್ದಿಲ್ಲದೆ, ‘ಶುಭಾಶಯ’ ಎಂಬ ವೀಡಿಯೋ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ.

ಜನಪ್ರಿಯ ಗೀತರಚನೆಕಾರ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದು ನಿರ್ದೇಶಿಸಿರುವ ‘ಶುಭಾಶಯ’ ಎಂಬ ಹೊಸ ಆಲ್ಬಂ ಗೀತೆ ಅನಾವರಣಗೊಂಡಿದೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ದಂಪತಿ ಇತ್ತೀಚೆಗೆ ‘ಶುಭಾಶಯ’ ಆಲ್ಬಂ ಗೀತೆಯನ್ನು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.

ಇದನ್ನು ಓದಿ: ಕಾಂತಾರ – ಅಧ್ಯಾಯ 1’ ಚಿತ್ರಕ್ಕೆ ನಟ-ಗಾಯಕ ದಿಲ್ಜಿತ್ ದೋಸಾಂಜ್ ಎಂಟ್ರಿ

ಈ ಹಾಡಿನ ಕುರಿತು ಮಾತನಾಡುವ ಪೃಥ್ವಿ, ‘ಕೆಲವು ಚಿತ್ರತಂಡಗಳ ಜೊತೆಗೆ ಸೇರಿಕೊಂಡರೆ, ನಾವು ಸಹ ಸಾಕಷ್ಟು ಕಲಿಯುವುದಕ್ಕೆ ಸಿಗುತ್ತದೆ. ನಾನು ಈ ಹಾಡಿನ ಚಿತ್ರೀಕರಣದಲ್ಲಿ ಸಾಕಷ್ಟು ಕಲಿತಿದ್ದೇನೆ. ನಾಗಾರ್ಜುನ ಶರ್ಮ ಅವರ ಜೊತೆಗೆ ನನಗೆ ಅಷ್ಟೇನೂ ಒಡನಾಟವಿರಲಿಲ್ಲ. ಅವರೊಬ್ಬ ಒಳ್ಳೆಯ ತಂತ್ರಜ್ಞ. ಮುಂದಿನ ದಿನಗಳಲ್ಲಿ ಅವರೊಬ್ಬ ಒಳ್ಳೆಯ ನಿರ್ದೇಶಕರಾಗುತ್ತಾರೆ ಎಂಬ ನಂಬಿಕೆ ಇದೆ. ಇಷ್ಟು ಚೆನ್ನಾಗಿ ನಾನು ಯಾವ ಚಿತ್ರದಲ್ಲೂ ಕಾಣಿಸಿರಲಿಲ್ಲ. ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ಈ ಹಾಡಿನಲ್ಲಿ ಪೇಂಟರ್ ಒಬ್ಬನ ಪ್ರೇಮಕಥೆಯನ್ನು ನಾಗಾರ್ಜುನ್ ಶರ್ಮ ಕಟ್ಟಿಕೊಟ್ಟಿದ್ದಾರೆ. ಪೃಥ್ವಿ ಅಂಬಾರ್ ಪೇಂಟರ್ ಆಗಿ, ಆತನ ಪ್ರೇಯಸಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. ‘ಅವಳು ಹೋಗು ಅಂದಾಗಲೇ ಸತ್ತಿದ್ದೆ, ಈಗ ಪೂರ್ತಿ ಮಣ್ಣಾಗಿದ್ದೇನೆ, ಆದರೂ ಅವಳಿಗೆ ಕೋರಲು ಹೊರಟಿರುವೆ ಶುಭಾಶಯ‌ …’ ಎಂದು ಶುರುವಾಗುವ ಹಾಡನ್ನು ಸಿನಿಮಾ ರೀತಿಯೇ ಸುಂದರವಾಗಿ ಚಿತ್ರೀಕರಣ ಮಾಡಲಾಗಿದೆ.

ತನ್ನ ಹಳೆಯ ಪ್ರೇಮಿಯ ಮದುವೆಗೆ ಹೋಗಿ ಪ್ರಿಯಕರ ಶುಭಾಶಯ ಕೋರುವುದೇ ‘ಶುಭಾಶಯ’ ಆಲ್ಬಂ ಸಾಂಗ್ ಹೈಲೆಟ್. ಜಸ್ಕರಣ್ ಸಿಂಗ್ ಈ ಗೀತೆಗೆ ಧ್ವನಿಯಾಗಿದ್ದು, ಜೋ ಕೋಸ್ಟಾ ಸಂಗೀತ ಹಾಡಿನ ಅಂದ ಹೆಚ್ಚಿಸಿದೆ. ವೈಷ್ಣವಿ ಫಿಲ್ಮಂಸ್ ಬ್ಯಾನರ್ ಈ ಆಲ್ಬಂ ಹಾಡನ್ನು ನಿರ್ಮಿಸಿದ್ದು, ವೈಷ್ಣವಿ ಫಿಲ್ಮಂಸ್ ಯೂಟ್ಯೂಬ್ ನಲ್ಲಿ ಶುಭಾಶಯ ಆಲ್ಬಂ ಸಾಂಗ್ ವೀಕ್ಷಣೆಗೆ ಲಭ್ಯವಿದೆ.

Tags:
error: Content is protected !!