Mysore
27
scattered clouds

Social Media

ಬುಧವಾರ, 21 ಜನವರಿ 2026
Light
Dark

ಸಿನಿಮಾ ನಿರ್ಮಾಣದತ್ತ ಪ್ರಜ್ವಲ್: ಪುರಾತನ ಫಿಲಂಸ್‍ ಜೊತೆ ನಿರ್ಮಾಣ

ಕೆಲವು ವರ್ಷಗಳ ಹಿಂದೆ ಹಿರಿಯ ನಟ ದೇವರಾಜ್‍, ಡೈನಾಮಿಕ್‍ ವಿಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ‘ನೀನಾದೆ ನಾ’ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿ ಅವರ ಮಗ ಪ್ರಜ್ವಲ್‍ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ ಪ್ರಜ್ವಲ್‍ ಸಹ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಪ್ರಜ್ವಲ್‍ ಸಹೋದರ ಪ್ರಣಾಮ್‍ ಅಭಿನಯದ ಮೊದಲ ಚಿತ್ರ ‘ಸನ್‍ ಆಫ್‍ ಮುತ್ತಣ್ಣ’ ಇದೇ ಶುಕ್ರವಾರ (ಸೆ.12) ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಪುರಾತನ ಫಿಲಂಸ್‍ ನಿರ್ಮಾಣ ಮಾಡುತ್ತಿದೆ. ‌ಕನ್ನಡ ಪ್ರೇಕ್ಷಕರಿಗೆ ಸದಭಿರುಚಿಯ ಸಿನಿಮಾಗಳ ಮೂಲಕ ಉತ್ತಮ ಮನರಂಜನೆ ನೀಡುವ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆ ಇದೀಗ ಪ್ರಜ್ವಲ್‍ ದೇವರಾಜ್‍ ಜೊತೆಗೆ ಕೈಜೋಡಿಸಿದೆ.

ಪುರಾತನ ಫಿಲಂಸ್ ಮುಂದಿನ ದಿನಗಳಲ್ಲಿ ನಟ ಪ್ರಜ್ವಲ್ ಜೊತೆಗೆ ಸೇರಿ ನಿರ್ಮಾಣ ಮಾಡಲು ಮುಂದಾಗಿದೆ. ಪುರಾತನ ಫಿಲಂಸ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ P2 ಪ್ರೊಡಕ್ಷನ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಇದರ ಮೂಲಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಮತ್ತು ಒಳ್ಳೆಯ ಕಥೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಿದೆ.

ಈ ಸಂಸ್ಥೆಯ ಮೊದಲ ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಪ್ರಣಾಮ್‍ ನಾಯಕನಾಗಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ‘ಸನ್‍ ಆಫ್‍ ಮುತ್ತಣ್ಣ’ ಚಿತ್ರೀಕರಣ ಮುಗಿಯುತ್ತಿದ್ದಂತೆ, ಆ ತಂಡದ ಜೊತೆಗೆ ಇನ್ನೊಂದು ಚಿತ್ರ ಮಾಡುವುದಾಗಿ ಪುರಾತನ ಫಿಲಂಸ್‍ ಘೋಷಿಸಿತ್ತು. ಅದರಂತೆ ಈ ಚಿತ್ರದಲ್ಲೂ ಪ್ರಣಾಮ್‍ ನಾಯಕನಾಗಿ ನಟಿಸಲಿದ್ದು, ಶ್ರೀಕಾಂತ್‍ ಹುಣಸೂರು ನಿರ್ದೇಶಿಸುವ ಸಾಧ್ಯತೆ ಇದೆ. ಸದ್ಯದಲ್ಲೇ ಪಿ2 ಪ್ರೊಡಕ್ಷನ್ಸ್ ಸಂಸ್ಥೆಯ ಮೊದಲ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

Tags:
error: Content is protected !!