Mysore
20
overcast clouds

Social Media

ಬುಧವಾರ, 09 ಅಕ್ಟೋಬರ್ 2024
Light
Dark

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಭೇಟಿ ಮಾಡಿದ ಹಾಸ್ಯನಟ ಸಾಧು ಕೋಕಿಲ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ರನ್ನು ಹಾಸ್ಯನಟ ಸಾಧುಕೋಕಿಲ ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್‌ರನ್ನು ನೋಡಲು ಸೆಲೆಬ್ರಿಟಿಗಳು ಸೇರಿದಂತೆ ಕುಟುಂಬಸ್ಥರು ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿಂದು ಸಾಧುಕೋಕಿಲ ಅವರು, ಮೊದಲ ಬಾರಿಗೆ ದರ್ಶನ್‌ ಭೇಟಿ ಮಾಡಲು ಪರಪ್ಪನ ಅಗ್ರಹಾರ ಜೈಲಿಗೆ ವಕೀಲರ ಜೊತೆ ಆಗಮಿಸಿದ್ದರು.

ಇಂದು ಬೆಳಿಗ್ಗೆಯೇ ಜೈಲಿಗೆ ಆಗಮಿಸಿದ್ದ ಸಾಧುಕೋಕಿಲ ಅವರು, ದರ್ಶನ್‌ರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು, ಈ ವೇಳೆ ವಕೀಲರ ಜೊತೆ ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ನಿನ್ನೆ ದಿನಕರ್‌ ತೂಗುದೀಪ್‌ ಕುಟುಂಬದ ಜೊತೆ ವಿನೋದ್‌ ರಾಜ್‌ ಕೂಡ ಜೈಲಿಗೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಇಂದು ಸಾಧುಕೋಕಿಲ ಜೈಲಿನಲ್ಲಿ ದರ್ಶನ್‌ ಭೇಟಿ ಮಾಡಿದ್ದಾರೆ.

 

 

Tags: