Mysore
14
few clouds

Social Media

ಗುರುವಾರ, 22 ಜನವರಿ 2026
Light
Dark

ಮುಖ್ಯಮಂತ್ರಿಯಾದ ಎಲ್‍.ಆರ್.ಶಿವರಾಮೇಗೌಡ; ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದಲ್ಲಿ ನಟನೆ

ರಾಗಿಣಿ ಅಭಿನಯದ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಚಿತ್ರೀಕರಣ ಮುಗಿದಿದೆ. ವಿಶೇಷವೆಂದರೆ, ಚಿತ್ರದಲ್ಲಿ ಮಾಜಿ ಸಂಸದ ಎಲ್‍.ಆರ್. ಶಿವರಾಮೇಗೌಡ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಟೀಸರ್ ಅನಾವರಣ ಮಂಗಳವಾರ ರಾತ್ರಿ ನಡೆಯಿತು.

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದಲ್ಲಿ ನಟಿಸಿರುವ ಕುರಿತು ಮಾತನಾಡಿರುವ ಶಿವರಾಮೇಗೌಡ, ‘ನಾನು ದೊಡ್ಡ ಮಂತ್ರಿ ಆಗಬೇಕಿದ್ದವನು. ನನ್ನ ಹಣೆಬರಹ ಸರಿ ಇರಲಿಲ್ಲವೇನೋ, ಅಲ್ಲಿಯವರೆಗೂ ಹೋಗೋಕೇ ಆಗಲಿಲ್ಲ. ನನ್ನನ್ನು ರಾಜಕೀಯವಾಗಿ ತುಳಿದವರೇ ಜಾಸ್ತಿ. ಹೋರಾಟದ ಮಧ್ಯೆ ಇಲ್ಲಿಯವರೆಗೂ ಬಂದಿದ್ದೇನೆ. ನಾನು ಶಾಸಕ, ಸಂಸದ ಆಗಿದ್ದೇನೆ. ಆದರೆ, ಮಂತ್ರಿ ಆಗೋಕೆ ಸಾಧ್ಯವಾಗಲಿಲ್ಲ. ನಿಜಜೀವನದಲ್ಲಿ ಮಂತ್ರಿ ಆಗದಿದ್ದರೂ, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿದ್ದೇನೆ’ ಎಂದರು.

ಇದನ್ನು ಓದಿ: ಸಿನಿಮಾ ನಿರ್ಮಾಣದತ್ತ ಪ್ರಜ್ವಲ್: ಪುರಾತನ ಫಿಲಂಸ್‍ ಜೊತೆ ನಿರ್ಮಾಣ

‘ಬಡಜನತೆಗೆ ಹಸಿವು ನೀಗಿಸುವ ಸಲುವಾಗಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಏನೇನಾಗುತ್ತದೆ ಎಂಬುದು ಗೊತ್ತಿದೆ. ಆ ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಒಂದು ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂಬುದು ನನಗೂ ಗೊತ್ತಿದೆ. ಈ ಚಿತ್ರದಲ್ಲಿ ಒಂದೊಳ್ಳೆಯ ಸಂದೇಶ ಹೇಳುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ರಾಮನಗರದಲ್ಲಿ ಚಿತ್ರೀಕರಣ ಸಂಪೂರ್ಣವಾಗಿದೆ. ಈ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಚಿತ್ರದಲ್ಲಿ ಪುಗಸಟ್ಟೆ ನಟಿಸಿದ್ದೇನೆ. ನಾನೇನು ದುಡ್ಡು ಪಡೆದಿಲ್ಲ. ಯಾರ್ಯಾರು ನ್ಯಾಯಬೆಲೆ ಅಂಗಡಿಯಿಂದ ಊಟ ಮಾಡುತ್ತಿದ್ದಾರೋ, ಅವರು ಒಮ್ಮೆ ನೋಡಿದರೆ ನಿರ್ಮಾಪಕರ ಜೋಳಿಗೆ ತುಂಬುತ್ತದೆ. ಈ ಚಿತ್ರವನ್ನು ಎಲ್ಲರೂ ನೋಡಿ ಹಾರೈಸಿ’ ಎಂದರು.

ಈ ಹಿಂದೆ ‘ತಾಯವ್ವ’ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ ಪವನ್‍ ಕುಮಾರ್, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಜಯಶಂಕರ ಟಾಕೀಸ್ ಬ್ಯಾನರಿನಲ್ಲಿ ತೇಜು ಮೂರ್ತಿ ಮತ್ತು ಎಸ್.ಪದ್ಮಾವತಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಬಿ. ರಾಮಮೂರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಹಾಡುಗಳಿಗೆ ಅನಂತ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ರಾಗಿಣಿ ಜೊತೆಗೆ ಕುಮಾರ್‍ ಬಂಗಾರಪ್ಪ, ದೊಡ್ಡಣ್ಣ, ಶ್ರೀನಾಥ್‍, ರೋಹಿತ್‍ ಶ್ರೀನಾಥ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Tags:
error: Content is protected !!