Mysore
15
clear sky

Social Media

ಮಂಗಳವಾರ, 20 ಜನವರಿ 2026
Light
Dark

ಅ.31ರಂದು ‘ಕೋಣ’ದ ಜೊತೆಗೆ ಬರ್ತಿದ್ದಾರೆ ಕೋಮಲ್ …

‘ಕೋಣ’ ಎಂಬ ಚಿತ್ರದಲ್ಲಿ ಕೋಮಲ್‍ ನಟಿಸುತ್ತಿರುವ ಸುದ್ದಿ ನೆನಪಿದೆಯಲ್ಲಾ? ಕಳೆದ ವರ್ಷ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಈಗ ಚಿತ್ರವು ಸದ್ದಿಲ್ಲದೆ ತಯಾರಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋರ್.31ರಂದು ಚಿತ್ರವು ಬಿಡುಗಡೆಯಾಗುತ್ತಿದೆ.

ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಶಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್ ಎನ್ ನಿರ್ಮಾಣ ಮಾಡಿರುವ ‘ಕೋಣ’ ಬಿಡುಗಡೆಯಾಗುತ್ತಿರುವ ವಿಷಯವನ್ನು ಹಂಚಿಕೊಳ್ಳಲು ಚಿತ್ರತಂಡದವರು ಸೇರಿದ್ದರು. ಈ ಚಿತ್ರಕ್ಕೆ ಹರಿಕೃಷ್ಣ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶಶಾಂಕ್‍ ಶೇಷಗಿರಿ ಸಂಗೀತ ಮತ್ತು ವೀನಸ್‍ ನಾಗರಾಜ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದನ್ನು ಓದಿ: ‘ಜೋಡೆತ್ತು’ ಜತೆ ಬಂದ ಚಿಕ್ಕಣ್ಣ: ಮೂರು ಭಾಷೆಗಳಲ್ಲಿ ಮಹೇಶ್‍ ಸಿನಿಮಾ

ಈ ವೇಳೆ ಮಾತನಾಡಿದ ನಟ ಕೋಮಲ್, ‘ನಾನು ಸ್ಕೂಲ್ ನಲ್ಲಿ ಓದಬೇಕಾದರೆ‌ ನಮ್ಮ ಟೀಚರ್, ಕೋಣ ಕೋಣ ಎನ್ನುತ್ತಿದ್ದರು. ನನಗೆ ಆಗ ಕೋಪ ಬರುತ್ತಿತ್ತು. ಈಗ ಕೋಣ ಚಿತ್ರ ಮಾಡುತ್ತಿರುವುದು ಖುಷಿಯಾಗುತ್ತದೆ. ನನಗೆ ಬಹಳ ತೃಪ್ತಿಕೊಟ್ಟ ಚಿತ್ರ ಇದು. ಸುಮಾರು ಎರಡು ತಿಂಗಳ ಹಿಂದೆಯೇ ಈ ಚಿತ್ರ ಬಂದಿದ್ದರೆ ಚೆನ್ನಾಗಿರುತ್ತಿತ್ತು’ ಎಂದರು.

ನಟಿ ತನಿಶಾ ಕುಪ್ಪಂಡ ಮಾತನಾಡಿ,‌ ‘ಕೋಣ’ ಸಿನಿಮಾದಲ್ಲಿ ನಾನು ಲಕ್ಷ್ಮಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೋಮಲ್ ಅವರು ನಾರಾಯಣ ಎಂಬ ಪಾತ್ರ ಮಾಡಿದ್ದಾರೆ. ಅವರ ಪತ್ನಿಯಾಗಿ ನಾನು ನಟಿಸಿದ್ದೇನೆ. ಇಷ್ಟು ದಿನ ನೀವು ನೋಡದ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಈ ಪಾತ್ರ ನೋಡಿ ಇವರು ಈ ರೀತಿ ನಟಿಸಬಹುದಾ ಎನ್ನಬಹುದು’ ಎಂದರು.

‘ಕೋಣ’ ಚಿತ್ರದಲ್ಲಿ ಕೋಮಲ್‍ ಮತ್ತು ತನಿಶಾ ಜೊತೆಗೆ ಕೀರ್ತಿರಾಜ್, ರಿತ್ವಿ ಜಗದೀಶ್, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್ ಮುಂತಾದವರು ನಟಿಸಿದ್ದಾರೆ.

Tags:
error: Content is protected !!