Mysore
17
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

11 ದಿನಗಳಲ್ಲಿ 655 ಕೋಟಿ ರೂ. ಗಳಿಕೆ ಮಾಡಿದ ‘ಕಾಂತಾರ – ಚಾಪ್ಟರ್ 1’

ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರದ ಅಬ್ಬರ ಮುಂದುವರೆದಿದೆ. ಮೊದಲ ವಾರ ಜಗತ್ತಿನಾದ್ಯಂತ 509.25 ಕೋಟಿ ರೂ. ಗಳಿಕೆ ಮಾಡಿದ್ದ ಚಿತ್ರವು, ಇದೀಗ 11ನೇ ದಿನಕ್ಕೆ 655 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ಈ ಕುರಿತು ಹೊಂಬಾಳೆ ಫಿಲಂಸ್‍ ಸಂಸ್ಥೆಯು ಸೋಷಿಯಲ್‍ ಮೀಡಿಯಾದಲ್ಲಿ ಹೊಸ ಪೋಸ್ಟರ್‍ ಬಿಡುಗಡೆ ಮಾಡುವ ಮೂಲಕ ಘೋಷಣೆ ಮಾಡಿದೆ. ‘ಕಾಂತಾರ – ಚಾಪ್ಟರ್ 1’ ಚಿತ್ರವು ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಎರಡನೇ ಚಿತ್ರವಾಗಿದೆ.

ಇದನ್ನು ಓದಿ: ಮೊದಲ ವಾರ 509 ಕೋಟಿ ಗಳಿಕೆ ಮಾಡಿದ ‘ಕಾಂತಾರ – ಚಾಪ್ಟರ್ 1’

ಇದಕ್ಕೂ ಮೊದಲು ‘ಕೆಜಿಎಫ್‍ – ಚಾಪ್ಟರ್ 2’ ಚಿತ್ರವು 1000 ಕೋಟಿ ರೂ. ಕ್ಲಬ್‍ ಸೇರಿತ್ತು. ಈಗ 500 ಕೋಟಿ ರೂ. ಗಳಿಕೆ ಮಾಡಿದ ಎರಡನೇ ಸ್ಥಾನದಲ್ಲಿ ‘ಕಾಂತಾರ – ಚಾಪ್ಟರ್ 1’ ಬಂದಿದೆ. ನಂತರದ ಸ್ಥಾನಗಳಲ್ಲಿ ‘ಕಾಂತಾರ’ ಮತ್ತು ‘ಕೆಜಿಎಫ್‍ – ಚಾಪ್ಟರ್ 1’ ಚಿತ್ರಗಳಿವೆ. ವಿಶೇಷವೆಂದರೆ, ಈ ನಾಲ್ಕೂ ಚಿತ್ರಗಳನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಂಸ್‍.

ಈ ಮಧ್ಯೆ, ರಿಷಭ್‍ ಶೆಟ್ಟಿ ಮತ್ತು ಚಿತ್ರತಂಡದವರು ಉತ್ತರ ಭಾರತದಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದು, ಹಲವು ರಾಷ್ಟ್ರೀಯ ವಾಹಿನಿಗಳಿಗೆ ಭೇಟಿ ನೀಡಿ, ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅದರ ಜೊತೆಗೆ ಅಮಿತಾಭ್‍ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗ ಕರೋಡ್ಪತಿ’ ಸೀಸನ್ 17ರ ಅತಿಥಿಯಾಗಿ ರಿಷಭ್ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವು ಇದೇ ಶುಕ್ರವಾರ ರಾತ್ರಿ ಪ್ರಸಾರವಾಗಲಿದೆ.

‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್‍ ನಿರ್ಮಿಸಿದ್ದು, ರಿಷಭ್‍ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್‍, ಅಚ್ಯುತ್‍ ಕುಮಾರ್‍, ಗುಲ್ಶನ್‍ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ.

Tags:
error: Content is protected !!