Mysore
20
overcast clouds
Light
Dark

ಕನ್ನಡಿಗರನ್ನು ಕೆಣಕಿದ ಫೋನ್‌ಪೇ ವಿರುದ್ಧ ನಟ ಕಿಚ್ಚ ಸುದೀಪ್‌ ಸಮರ

ಬೆಂಗಳೂರು: ಕನ್ನಡಿಗರ ಬಗ್ಗೆ ಮಾತನಾಡಿದ್ದಕ್ಕೆ ಫೋನ್‌ಪೇ ಸಂಸ್ಥೆ ಈಗ ಭಾರೀ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.

ಕನ್ನಡಿಗರ ಬಗ್ಗೆ ಮಾತನಾಡಿದ್ದಕ್ಕೆ ಫೋನ್‌ಪೇ ಸಂಸ್ಥೆ ಈಗ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ನಟ ಕಿಚ್ಚ ಸುದೀಪ್‌ ಕೂಡ ಫೋನ್‌ಪೇಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಡ್ಡಾಯಗೊಳಿಸುವ ಬಗ್ಗೆ ಕರ್ನಾಟಕ ಸರ್ಕಾರದ ಹೊಸ ಮಸೂದೆ ಬಗ್ಗೆ ಫೋನ್‌ಪೇ ಸಿಇಓ ಸಮೀರ್‌ ನಿಗಮ್‌ ಬಾಯಿಗೆ ಬಂದಂತೆ ಮಾತನಾಡಿದ್ದರು. ಈ ಬೆನ್ನಲ್ಲೇ ಫೋನ್‌ಪೇ ಸಿಇಓ ವಿರುದ್ಧ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಫೋನ್‌ಪೇ ವಿರುದ್ಧ ಭಾರೀ ಆಕ್ರೋಶ ಹೊರಹಾಕಿರುವ ನಟ ಕಿಚ್ಚ ಸುದೀಪ್‌ ಅವರು, ಫೋನ್‌ಪೇ ಇನ್ನು ಒಂದು ದಿನದ ಒಳಗೆ ಕನ್ನಡಿಗರ ಬಳಿ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರದ ನಿಲುವಿಗೆ ಬದ್ಧವಾಗಿ ಇರಬೇಕು. ಇಲ್ಲದೇ ಹೋದರೆ ತಾವು ಫೋನ್‌ಪೇ ಬ್ರಾಂಡ್‌ನ ಅಂಬಾಸಿಡರ್‌ ಆಗಿ ಮುಂದುವರಿಯದೇ ಇರಲು ನಿರ್ಧರಿಸಿದ್ದಾರೆ.

ಈ ಮೂಲಕ ನಟ ಕಿಚ್ಚ ಸುದೀಪ್‌ ಕನ್ನಡಿಗರ ಪರ ನಿಂತಿದ್ದು, ಅಭಿಮಾನಿಗಳಿಗೆ ಭಾರೀ ಸಂತಸ ತರಿಸಿದ್ದಾರೆ. ಈ ತಕ್ಷಣಕ್ಕೆ ಫೋನ್‌ಪೇ ಸಿಇಓ ಬುದ್ಧಿ ಕಲಿತು, ಕನ್ನಡಿಗರ ಬಳಿ ಕ್ಷಮೆ ಕೇಳದೇ ಹೋದರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಸಾಧ್ಯತೆಯಿದೆ.