‘ಸಿಂಪಲ್’ ಸುನಿ ಸದ್ದಿಲ್ಲದೆ ‘ಗತವೈಭವ’, ‘ದೇವರು ರುಜು ಮಾಡಿದನು’, ‘ಮೋಡ ಕವಿದ ವಾತಾವರಣ’, ‘ರಿಚ್ಚಿ ರಿಚ್’ ಹೀಗೆ ಒಂದರಹಿಂದೊಂದು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಈ ಪೈಕಿ ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಈ ಪೈಕಿ ‘ಗತವೈಭವ’ ಮೊದಲು ಬಿಡುಗಡೆಯಾಗುತ್ತಿದ್ದು, ಚಿತ್ರವು ನವೆಂಬರ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಗತವೈಭವ’ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಸಲುವಾಗಿ ಸುನಿ ಮಾಧ್ಯಮದವರ ಎದುರು ಬಂದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಗತವೈಭವ’ ನಾನು ಬಹಳ ಗಂಭೀರವಾಗಿ ತೆಗೆದುಕೊಂಡ ಚಿತ್ರ. ನನ್ನ ಬ್ಯಾನರ್‌ನಡಿ ಮಾಡಬೇಕು ಎಂದುಕೊಂಡ ಸಿನಿಮಾ ಇದು. ದುಶ್ಯಂತ್ ಈ ಪ್ರಾಜೆಕ್ಟ್ ಮಾಡಬೇಕು ಎಂದು ಬರೆದಿತ್ತು. ಅದಕ್ಕೆ ಇದು ಅವರ ಅಭಿನಯದಲ್ಲಿ ಮೂಡಿಬಂದಿದೆ. ಈ ಚಿತ್ರಕ್ಕೆ ನಾಲ್ಕು ಸಿನಿಮಾ ಮಾಡಿದಷ್ಟು ಈ ಜರ್ನಿ ಆಗಿದೆ. ಅಂದುಕೊಂಡ ರೀತಿ ‘ಗತವೈಭವ’ ಮೂಡಿ ಬಂದಿದೆ. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಈ ಚಿತ್ರ ರಿಲೀಸ್ ಆದರೆ ಪ್ರಚಾರವಾಗುತ್ತವೆ. ಈ ಚಿತ್ರದಲ್ಲಿ ಮನರಂಜನೆ, ಎಮೋಷನ್ ಎಲ್ಲವೂ ಇದೆ’ ಎಂದರು.
ಇದನ್ನೂ ಓದಿ:-ಕರೂರು ಕಾಲ್ತುಳಿತ ದುರಂತ ಪ್ರಕರಣ ನಡೆಯಲು ಡಿಎಂಕೆ ಸರ್ಕಾರವೇ ನೇರ ಕಾರಣ: ಆರ್.ಅಶೋಕ್ ಆರೋಪ
ನಟ ದುಶ್ಯಂತ್ ಮಾತನಾಡಿ, ‘ನೂರು ದಿನಕ್ಕೂ ಹೆಚ್ಚು ಕಾಲ ಶೂಟಿಂಗ್ ಮಾಡಿದ್ದೇವೆ. ಪೋರ್ಚುಗಲ್ ಚಿತ್ರೀಕರಣ ಮಾಡಿದ್ದೇವೆ. ಗ್ರಾಫಿಕ್ ಕಾರಣದಿಂದ ಸಿನಿಮಾ ತಡವಾಯ್ತು. ನಮ್ಮ ನಿರೀಕ್ಷೆಗೂ ಮೀರಿದಷ್ಟು ಚಿತ್ರ ಚೆನ್ನಾಗಿ ಬಂದಿದೆ. ಸುನಿ ಇದುವರೆಗೂ ಒಂಬತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದು ಅವರ 10ನೇ ಸಿನಿಮಾ. ಅವರು 10 ಸಿನಿಮಾಗಳಲ್ಲೇ ಇದು ಬೆಸ್ಟ್ ಸಿನಿಮಾವಾಗಲಿದೆ. ಆಶಿಕಾ ಅವರ ವೃತ್ತಿಜೀವನದಲ್ಲೂ ಇದು ಬೆಸ್ಟ್ ಚಿತ್ರ ಎನಿಸಿಕೊಳ್ಳಲಿದೆ. ನವೆಂಬರ್.14ಕ್ಕೆ ‘ಗತವೈಭವ’ ತೆರೆಗೆ ಬರಲಿದೆ. ಅಕ್ಟೋಬರ್‌ನಲ್ಲಿ ಹಾಡುಗಳನ್ನು ರಿಲೀಸ್ ಮಾಡುವ ಯೋಚನೆ ಇದೆ ಎಂದರು.
ಆಶಿಕಾ ರಂಗನಾಥ್‍ಗೆ ‘ಗತವೈಭವ’ ವಿಶೇಷವಾದ ಸಿನಿಮಾ ಆಗಲಿದೆಯಮತೆ. ತಂಜಾವೂರಿನಲ್ಲಿ ಶೂಟಿಂಗ್ ಸಮಯದಲ್ಲಿ ಕೇಳಿದ ಕಥೆ. ತುಂಬಾ ಎಂಜಾಯ್ ಮಾಡಿಕೊಂಡು ಕಥೆ ಕೇಳಿದೆ. ಕಥೆ ಹೊಸದಾಗಿದೆ. ಪ್ರತಿಯೊಬ್ಬ ಕಲಾವಿದರು ಈ ರೀತಿ ಪಾತ್ರ ಸಿಗಲು ಅದೃಷ್ಟ ಮಾಡಿರಬೇಕು. ನನಗೆ ಚಿತ್ರದಲ್ಲಿ ನಾಲ್ಕು ಲುಕ್ ಇದೆ. ‘ಗತವೈಭವ’ದಲ್ಲಿ ನಟಿಸಿರುವುದು ಬೇರೆಯದ್ದೇ ಅನುಭವ ಎಂದರು.
‘ಗತವೈಭವ’ ಚಿತ್ರವನ್ನು ಸವೇಗರ ಸಿಲ್ವರ್ ಸ್ಕ್ರೀನ್ಸ್ ಸಂಸ್ಥೆಯಡಿ ದೀಪಕ್ ತಿಮ್ಮಪ್ಪ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದುಷ್ಯಂತ್, ಆಶಿಕಾ ಜೊತೆಗೆ ಸುಧಾ ಬೆಳವಾಡಿ, ಕಿಶನ್ ಬೆಳಗಲಿ, ಕೃಷ್ಣ ಹೆಬ್ಬಾಳೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಜೂಡಾ ಸ್ಯಾಂಡಿ ಸಂಗೀತವಿದೆ.





