Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ‘ಚಾಮಯ್ಯ ಸನ್ ಆಫ್ ರಾಮಾಚಾರಿ’

‘ನಾಗರಹಾವು’ ಚಿತ್ರದ ಮುಂದುವರೆದ ಭಾಗವಾದ ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರದ ಬಗ್ಗೆ ನೆನಪಿರಬಹುದು. ಕೆಲವು ತಿಂಗಳುಗಳ ಹಿಂದೆ ಚಿತ್ರತಂಡ, ಮಾಧ್ಯಮದವರ ಎದುರು ಚಿತ್ರದ ಬಗ್ಗೆ ಮಾತನಾಡಿದ್ದರು. ಇದೀಗ ಚಿತ್ರವು ಇದೇ ಸೆ.18ರಂದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ.

ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪಲ್ಲಕ್ಕಿ ರಾಧಾಕೃಷ್ಣ ಕಥೆ-ಚಿತ್ರಕಥೆ ರಚಿಸುವುದರ ಜೊತೆಗೆ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಕೋಟೆ ನಾಡಿನ ನಾಗರ ಹಾವು’ ಎಂಬ ಅಡಿಬರಹವಿದೆ.

ಚಿತ್ರ ಬಿಡುಗಡೆಯ ಕುರಿತು ಮಾತನಾಡುವ ಪಲ್ಲಕ್ಕಿ ರಾಧಾಕೃಷ್ಣ, ’ಡಾ. ವಿಷ್ಣುವರ್ಧನ್ ಹುಟ್ಟುಹಬ್ದ, ಸೆಪ್ಟಂಬರ್.18ರಂದು ತೆರೆಗೆ ತರುವ ಯೋಜನೆ ಇತ್ತು. ಆದರೆ ಈಗಾಗಲೇ 10 ಸಿನಿಮಾಗಳು ಚಿತ್ರಮಂದಿರ ಗೇಟ್‌ನಲ್ಲಿ ನಿಂತಿವೆ. ಆದಕಾರಣ ಸಿನಿಪಂಡಿತರು, ಸಾಹಸ ಸಿಂಹ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಪ್ರದರ್ಶನ ಮಾಡಲು ಚಿಂತನೆ ನಡೆಸಲಾಗಿದೆ. ಮೈಸೂರು, ಚಿತ್ರದುರ್ಗ, ಶಿವಮೊಗ್ಗದಲ್ಲಿ ಹೆಚ್ಚು ಅಭಿಮಾನಿಗಳು ಇರುವುದರಿಂದ, ಒಂದು ದಿನದ ಗಳಿಕೆ ಹಣವನ್ನು ಅಭಿಮಾನ ಸಂಘದ ಸಮಾಜಮುಖಿ ಕಾರ್ಯಕ್ಕೆ ನೀಡಲಾಗುವುದು’ ಎಂದರು.

‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರದಲ್ಲಿ ರಾಮಾಚಾರಿ ಪಾತ್ರವನ್ನು ಜಯಶ್ರೀರಾಜ್‍ ನಿರ್ವಹಿಸಿದ್ದಾರೆ. ಚಿತ್ರೀಕರಣದ ಅನುಭವ ಹಂಚಿಕೊಂಡು, ’ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇನೆ. ಬದ್ದತೆಯಿಂದ ಪ್ರಯೋಗ ಮಾಡಿದ್ದೇನೆ’ ಎಂದರು.

ಮಿಕ್ಕಂತೆ ಪ್ರೇಮಾ ಗೌಡ, ಪ್ರದೀಪ್‍ ಶಾಸ್ತ್ರಿ, ಚೈತ್ರಾ, ಪ್ರಕಾಶ್‍ ಅರಸು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸ್ಯಾಂ ಸಂಗೀತ ಮತ್ತು ಎಂ.ಆರ್‍.ಸೀನು ಛಾಯಾಗ್ರಹಣವಿದೆ. ಈ ಚಿತ್ರಕ್ಕಾಗಿ ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ.

Tags:
error: Content is protected !!