Mysore
23
clear sky

Social Media

ಮಂಗಳವಾರ, 24 ಮಾರ್ಚ್ 2026
Light
Dark

ಶಿಲ್ಪಾ ಶೆಟ್ಟಿ ಫ್ಲಾಟ್‌, ರಾಜ್‌ ಕುಂದ್ರಾ 97 ಕೋಟಿ ಆಸ್ತಿ ಇಡಿ ವಶಕ್ಕೆ

ಮುಂಬೈ: ಜಾರಿ ನಿರ್ದೇಶನಾಲಯ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್‌ ಕುಂದ್ರಾ ಮೇಲೆ ಕಣ್ಣಿಟ್ಟಿದ್ದು, ಇದೀಗ ದಂಪತಿಗೆ ಸೇರಿದ 97.97 ಕೋಟಿ ರೂ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ವರದಿಯಾಗಿದೆ. ಇದರಲ್ಲಿ ಶಿಲ್ಪಾ ಶೆಟ್ಟಿಗೆ ಸೇರಿದ‌ ಜುಹುವಿನಲ್ಲಿರುವ ಫ್ಲಾಟ್ ಸಹ ಸೇರಿದೆ ಎನ್ನಲಾಗಿದೆ.

2022ರ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ಮುಂಬೈನ ಜಾರಿ ನಿರ್ದೇಶನಾಲಯವು ಶಿಲ್ಪಾ ಶೆಟ್ಟಿ ಹೆಸರಿನಲ್ಲಿರುವ ರೆಸಿಡೆನ್ಸಿಯಲ್‌ ಫ್ಲಾಟ್‌, ಪುಣೆಯಲ್ಲಿರುವ ಬಂಗಲೆ ಹಾಗೂ ರಾಜ್‌ ಕುಂದ್ರಾಗೆ ಸೇರಿದ ಈಕ್ವಿಟಿ ಶೇರುಗಳನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ. ತನಿಖಾ ಏಜೆನ್ಸಿಯ ಪ್ರಕಾರ ಇಡಿ ಈಗಾಗಲೇ ತನಿಖೆ ನಡೆಸಿದ ಕ್ರಿಪ್ಟೊಕರೆನ್ಸಿ ಮೂಲಕ ಈ ಆಸ್ತಿಯನ್ನು ಗಳಿಸಿದ್ದಾರೆ ಎಂದು ಇಡಿ ಹೇಳಿದೆ.

Tags:
error: Content is protected !!