Mysore
21
scattered clouds

Social Media

ಭಾನುವಾರ, 25 ಜನವರಿ 2026
Light
Dark

‘ಮಾರುತ’ ಚಿತ್ರದಲ್ಲಿ ನಾಯಕ ನಾನಲ್ಲ ಎಂದ ‘ದುನಿಯಾ’ ವಿಜಯ್

‘ದುನಿಯಾ’ ವಿಜಯ್ ಮತ್ತು ಶ್ರೇಯಸ್‍ ಮಂಜು ಅಭಿನಯದ ‘ಮಾರುತ’ ಚಿತ್ರವು ಅಕ್ಟೋಬರ್ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಾಯಕ ತಾನಲ್ಲ, ಸುಮ್ಮನೆ ನಾಯಕ ಎಂದು ಬಿಂಬಿಸಬೇಡಿ ಎಂದು ‘ದುನಿಯಾ’ ವಿಜಯ್‍ ಹೇಳಿದ್ದಾರೆ.

ಮಂಗಳವಾರವಷ್ಟೇ, ‘ಮಾರುತ’ ಚಿತ್ರದ ಬಿಡುಗಡೆ ದಿನಾಂಕ ಹೊರಬಿದ್ದಿದ್ದು, ಕೆಲವು ದಿನಗಳ ಹಿಂದೆ ಚಿತ್ರದ ಟೀಸರ್‍ ಸಹ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ‘ದುನಿಯಾ’ ವಿಜಯ್‍ ಅವರನ್ನು ನಾಯಕ ಎಂದು ಬಿಂಬಿಸಲಾಗಿದೆ. ಆದರೆ, ಚಿತ್ರವಾದ ನಾಯಕ ತಾನಲ್ಲ, ಶ್ರೇಯಸ್‍ ಮಂಜು ಎಂದು ವಿಜಯ್‍ ಹೇಳಿದ್ದಾರೆ.

ಇದನ್ನು ಓದಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇನ್ನೊಂದು ಬಯೋಪಿಕ್‍ ಘೋಷಣೆ

ಸದ್ಯ ಚೆನ್ನೈನಲ್ಲಿ ‘ಮೂಕುತಿ ಅಮ್ಮನ್ 2’ ಚಿತ್ರದ ಚಿತ್ರೀಕರಣದಲ್ಲಿ ನಿರತವಾಗಿರುವ ವಿಜಯ್‍, ಈ ಕುರಿತು ಮಾತನಾಡಿದ್ದಾರೆ. ‘ನಿರ್ಮಾಪಕ ಕೆ, ಮಂಜು ಮತ್ತು ನಿರ್ದೇಶಕ ಎಸ್. ನಾರಾಯಣ್ ಅವರ ಮೇಲೆ ಅಪಾರ ಅಭಿಮಾನ ಮತ್ತು ಗೌರವವಿದೆ. ಹೀಗಾಗಿ ‘ಮಾರುತ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ, ನಾಯಕ ನಾನಲ್ಲ. ಕೆ. ಮಂಜು ಅವರ ಮಗ ಶ್ರೇಯಸ್ ಮಂಜು ಅವರನ್ನು ಚಿಕ್ಕ ವಯಸ್ಸಿನಿಂದ ಬಲ್ಲೆ. ಹೀಗಾಗಿ ಆತನಿಗೆ ಒಳಿತಾಗಲಿ ಎನ್ನುವ ಕಾರಣಕ್ಕೆ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದೇನೆ’ ಎಂದಿದ್ದಾರೆ.

‘ಮಾರುತ’ ಚಿತ್ರದಲ್ಲಿ ನಾಯಕ ಎಂದು ಬಿಂಬಿಸಲು ಪ್ರಯತ್ನ ಮಾಡಬೇಡಿ ಎಂದಿರುವ ಅವರು, ‘ಚಿತ್ರಕ್ಕೆ ನಾನು ನಾಯಕನಲ್ಲ. ತಂಡಕ್ಕೆ ಒಳಿತಾಗಲಿ ಎಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಅಷ್ಟೇ’ ಎಂದು ಹೇಳಿದ್ದಾರೆ.

‘ಮಾರುತ’ ಚಿತ್ರವಲ್ಲದೆ ‘ಲ್ಯಾಂಡ್‍ ಲಾರ್ಡ್’ ಚಿತ್ರದಲ್ಲೂ ವಿಜಯ್‍ ನಟಿಸಿದ್ದು, ಅದರ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ನಡೆಯತ್ತಿವೆ, ಎಲ್ಲಾ ಅಂದುಕೊಂಡಂತೆ ಆದರೆ ವರ್ಷಾಂತ್ಯಕ್ಕೆ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ ಎಂದಿದ್ಧಾರೆ. ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಲಾಂಡ್ ಲಾರ್ಡ್’ ಚಿತ್ರದಲ್ಲಿ ಇದುವರೆಗೆ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ವಿಜಯ್‍ ಕಾಣಿಸಿಕೊಂಡಿದ್ದು, ತಮ್ಮ ವೃತ್ತಿ ಬದುಕಿನ ಮತ್ತೊಂದು ವಿಭಿನ್ನ ಮಾದರಿಯ ಚಿತ್ರವಾಗಲಿದೆ ಎಂದು ನಂಬಿದ್ದಾರೆ.

Tags:
error: Content is protected !!