Mysore
29
scattered clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಚೆಕ್‌ ಬೌನ್ಸ್‌ ಪ್ರಕರಣ: ಹಣ ಪಾವತಿಸದಿದ್ದರೆ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ

ಮುಂಬೈ: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ತೆಲುಗು ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅವರನ್ನು ಮುಂಬೈನ ಸ್ಥಳೀಯ ನ್ಯಾಯಾಲಯ ದೋಷಿ ಎಂದು ಘೋಷಿಸಿದ್ದು, 3 ತಿಂಗಳ ಒಳಗಾಗಿ ಹಣ ಪಾವತಿಸದಿದ್ದರೆ 3 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

2018ರಲ್ಲಿ ಮುಂಬೈನಲ್ಲಿ ರಾಮ್‌ಗೋಪಾಲ್‌ ವರ್ಮಾ ವಿರುದ್ಧ ಮಹೇಶ್ಚಂದ್ರ ಮಿಶ್ರಾ ಎನ್ನುವವರು ಚೆಕ್‌ ಬೌನ್ಸ್‌ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಹಲವು ಬಾರಿ ನೋಟಿಸ್‌ ನೀಡಿತ್ತು. ಆದರೂ ಅವರು ಹಾಜರಾಗಿರಲಿಲ್ಲ.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿದೆ. ರಾಮಗೋಪಾಲ್‌ ವರ್ಮಾ ಅವರು ಮಿಶ್ರಾ ಅವರಿಗೆ 3.72 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ಆದೇಶಿಸಿದೆ. ಒಂದು ವೇಳೆ 3 ತಿಂಗಳ ಒಳಗಾಗಿ ಹಣ ಪಾವತಿಸದೇ ಇದ್ದರೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಿದೆ.

Tags: