Mysore
19
scattered clouds

Social Media

ಸೋಮವಾರ, 26 ಜನವರಿ 2026
Light
Dark

ಮೊದಲ ಬಾಲಿವುಡ್‍ ಚಿತ್ರ ಬಿಡುಗಡೆಗೂ ಮೊದಲೇ ಶ್ರೀಲೀಲಾಗೆ ಇನ್ನೊಂದು ಆಫರ್‌

Sreeleela

ಶ್ರೀಲೀಲಾ, ಕಾರ್ತಿಕ್‍ ಆರ್ಯನ್‍ ಅಭಿನಯದ ಬಾಲಿವುಡ್‍ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಗೊತ್ತಿರಬಹುದು. ಈ ಚಿತ್ರದ ಚಿತ್ರೀಕರಣವೇ ಇನ್ನೂ ಮುಗಿದಿಲ್ಲ. ಅಷ್ಟರಲ್ಲೇ ಹಿಂದಿಯ ಇನ್ನೊಂದು ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿರುವ ಸುದ್ದಿಯೊಂದು ಕೇಳಿ ಬಂದಿದೆ. ಈ ಬಾರಿ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ನಟಿಸುತ್ತಾರೆ ಎಂದು ಹೇಳಲಾಗಿದೆ.

ಈ ಹಿಂದೆ ತೆಲುಗಿನಲ್ಲಿ ‘ಡ್ರೀಮ್ ಗರ್ಲ್’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ರಾಜ್‍ ಶಾಂಡಿಲ್ಯ, ಇದೀಗ ಸಿದ್ಧಾರ್ಥ್‍ ಮಲ್ಹೋತ್ರಾ ಅವರನ್ನು ನಿರ್ದೇಶಿಸುವುದಕ್ಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದು, ಒಬ್ಬ ನಾಯಕಿಯ ಪಾತ್ರಕ್ಕೆ ಶ್ರೀಲೀಲಾ ಅವರನ್ನು ಕೇಳಲಾಗಿದೆಯಂತೆ. ಇನ್ನೊಂದು ಪಾತ್ರಕ್ಕೆ ಅನನ್ಯ ಪಾಂಡೆ ಅವರನ್ನು ಸಂಪರ್ಕಿಸಲಾಗಿದೆಯಂತೆ. ಈ ಚಿತ್ರ ಯಾವಾಗ ಶುರುವಾಗುತ್ತದೆ, ಯಾರೆಲ್ಲಾ ಇರುತ್ತಾರೆ ಎಂಬುದರ ಕುರಿತು ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ಶ್ರೀಲೀಲಾ ಅಭಿನಯದ ಯಾವೊಂದು ತೆಲುಗು ಚಿತ್ರವೂ ದೊಡ್ಡ ಯಶಸ್ಸು ಕಾಣದಿದ್ದರೂ, ಆಕೆಯ ಬೇಡಿಕೆ ಸ್ವಲ್ಪವೂ ಕಡಿಮೆಯಾಗಿಲ್ಲ. ಅದಕ್ಕೆ ಕಾರಣ, ‘ಪುಷ್ಪ 2’ ಚಿತ್ರದ ಐಟಂ ಸಾಂಗ್‍. ‘ಪುಷ್ಪ 2’ ಚಿತ್ರದ ‘ಕಿಸ್ಸಿಕ್‍’ ಎಂಬ ಐಟಂ ಹಾಡಿಗೆ ಶ್ರೀಲೀಲಾ ಹೆಜ್ಜೆ ಹಾಕಿದ್ದು, ಈ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಇತ್ತೀಚೆಗೆ ನಿತಿನ್‍ ಮತ್ತು ಶ್ರೀಲೀಲಾ ಅಭಿನಯದ ‘ರಾಬಿನ್‍ಹುಡ್‍’ ಚಿತ್ರ ಬಿಡುಗಡೆಯಾಯಿತು. ಈ ಚಿತ್ರ ಬಂದಿದ್ದೂ ಗೊತ್ತಾಗಲಿಲ್ಲ, ಹೋಗಿದ್ದೂ ಗೊತ್ತಾಗಲಿಲ್ಲ. ಆ ಮಟ್ಟಿಗೆ ಫ್ಲಾಪ್‍ ಎಂದನಿಸಿಕೊಂಡಿತು. ಹೀಗಿರುವಾಗಲೇ, ರವಿತೇಜ ಅಭಿನಯದ ‘ಮಾಸ್ ಜಾತ್ರ’ ಎಂಬ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಶ್ರೀಲೀಲಾ, ತಮಿಳಿನಲ್ಲಿ ಶಿವಕಾರ್ತಿಕೇಯನ್‍ ಅಭಿನಯದ ‘ಪರಾಶಕ್ತಿ’ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.

ಇನ್ನು, ಶ್ರೀಲೀಲಾ ನಟಿಸುತ್ತಿರುವ ಏಕೈಕ ಚಿತ್ರ ಎಂದರೆ ಅದು ಗಾಲಿ ಜನಾರ್ಧನ ರೆಡ್ಡಿ ಮಗ ಕಿರೀಟಿ ರೆಡ್ಡಿ ಅಭಿನಯದ ‘ಜ್ಯೂನಿಯರ್’ ಮಾತ್ರ. ಆ ಚಿತ್ರವು ಕನ್ನಡವಷ್ಟೇ ಅಲ್ಲದೆ, ತೆಲುಗಿನಲ್ಲೂ ತಯಾರಾಗುತ್ತಿದೆ. ಈ ಚಿತ್ರ ಭರ್ಜರಿಯಾಗಿ ಪ್ರಾರಂಭವಾದರೈ, ಕೆಲವು ತಿಂಗಳುಗಳಿಂದ ಯಾವುದೇ ಸುದ್ದಿ ಇಲ್ಲ. ಚಿತ್ರ ನಿಂತಿದೆಯೋ, ಮುಂದುವರೆಯುತ್ತದೋ ಎಂಬುದರ ಕುರಿತು ಸಹ ಸೂಕ್ತ ಮಾಹಿತಿ ಇಲ್ಲ.

Tags:
error: Content is protected !!