Mysore
21
overcast clouds
Light
Dark

17ಕೋಟಿ ೭೦ಲಕ್ಷಕ್ಕೆ ಮಾರಾಟವಾದ ʼಕೆಡಿʼ ಸಿನಿಮಾದ ಆಡಿಯೋ ರೈಟ್ಸ್‌

ಬೆಂಗಳೂರು : ಧೃವ ಸರ್ಜಾ ಅಭಿನಯದ ʼಕೆಡಿʼ ಚಿತ್ರದ ಆಡಿಯೋ ರೈಟ್ಸ್‌ ಸುಮಾರು 17ಕೋಟಿ ೭೦ಲಕ್ಷ ರೂ ಗಳಿಗೆ ಮಾರಾಟವಾಗಿದೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿದ್ದು, ಆನಂದ್‌ ಆಡಿಯೋ ಸಂಸ್ಥೆ ಚಿತ್ರದ ಆಡೀಯೋ ರೈಟ್‌ಗಳನ್ನು ೧೭ಕೋಟಿ ೭೦ಲಕ್ಷ ರೂಗಳಿಗೆ ಖರೀದಿಸಿರುವುದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಪ್ರೇಮ್‌, ಚಿತ್ರದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಅಷ್ಟೇ ಅಲ್ಲದೇ ಹಾಡುಗಳು ತುಂಬಾ ಉತ್ತಮ ಗುಣಮಟ್ಟದಲ್ಲಿ ಬಂದಿವೆ ಎಂದು ತಿಳಿಸಿದರು.

ಚಿತ್ರದ ಹಾಡುಗಳ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅದಕ್ಕೆ ಬೇಕಾದ ಎಲ್ಲಾ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಹೀಗಾಗಿ ಕೊಂಚ ವೆಚ್ಚವೂ ಹೆಚ್ಚಾಗಿದೆ ಎಂದು ತಿಳಿಸಿದರು.