ಬೆಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲಾ ಮಾಡಿಸಿದ್ದ ರಿಷಬ್ ಶೆಟ್ಟಿ ತೊಡೆ ಮೇಲೆ ದೈವಾರಾಧಕ ಮಲಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ನಟ ರಿಷಬ್ ಶೆಟ್ಟಿ ತೊಡೆ ಮೇಲೆ ಮಲಗಿದ್ದು, ಪಂಜುರ್ಲಿಯಲ್ಲ ನರ್ತಕ ಎಂದು ಸೋಷಿಯಲ್ ಮೀಡಿಯಾಲ್ಲಿ ಹಲವರು ಟೀಕೆ ಮಾಡುತ್ತಿದ್ದಾರೆ. ಹರಕೆ ಕೋಲ ದೈವರಾಧನೆ ನಿಯಮಗಳ ವಿರುದ್ಧ ನಡೆಯಿತು ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ: ರಿಷಬ್ ಶೆಟ್ಟಿ ಹೊಗಳುವ ಭರದಲ್ಲಿ ಕಾಂತಾರ ದೈವಕ್ಕೆ ರಣವೀರ್ ಸಿಂಗ್ ಅಪಮಾನ ಆರೋಪ
ಮಂಗಳೂರಿನ ಬಾರೆಬೈಲ್‌ನಲ್ಲಿ ಹರಕೆ ಕೋಲ ನಡೆಯಿತು. ಈ ಸಂದರ್ಭದಲ್ಲಿ ದೈವ ನರ್ತಕ ರಿಷಬ್ ತೊಡೆ ಮೇಲೆ ಮಲಗಿದ್ದರು. ಕೋಲದ ವೇಳೆ ದೈವ ನರ್ತಕ ರಿಷಬ್ ಜೊತೆ ವರ್ತಿಸಿದ ಬಗ್ಗೆ ಟೀಕೆಗಳು ಕೇಳಿ ಬರುತ್ತಿದೆ.
ನರ್ತಕ ಹಾಕಿದ ಬಟ್ಟೆಗಳು ದೈವರಾಧನೆಗೆ ವಿರುದ್ಧವಾಗಿದೆ. ಕಡ್ತಳೆಯನ್ನು ತಲೆಗೆ ಹೊಡೆದುಕೊಳ್ಳುವುದಿಲ್ಲ. ಡ್ಯಾನ್ಸರ್‌ಗಳು ಹಾಕುವ ಬಟ್ಟೆ ಹಾಕಬಾರದು ಎಂದು ದೈವರಾಧಕ ತಮ್ಮಣ್ಣ ಶೆಟ್ಟಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.





