ಚಾಮರಾಜಗರ ಜಿಲ್ಲೆಯ ಪವಿತ್ರ ಯಾತ್ರಾ ಸ್ಥಳವಾದ ಮೇಲೆ ಮಹದೇಶ್ವರ ಬೆಟ್ಟದ ಅಸುಪಾಸಿನಲ್ಲಿ ವಾಸಿಸುವ ಒಡಕಟ್ಟು ಜನರು ಮದ್ಯವ್ಯಸನಿಗಳಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಕಳವಳಕಾರಿ ವಿಚಾರದ ಬಗ್ಗೆ ವಿಧಾನವುಷತ್ ಅಧಿವೇಶನದಲ್ಲಿ ಚರ್ಚೆ ನಡೆದಿದೆ.
ಹಿಂದೆಲ್ಲ ಸೋಲಿಗರು ಸಣ್ಣಪುಟ್ಟ ಕಾಯಿಲೆಗಳಿಗೆ ಒಳಗಾಗುತ್ತಿದ್ದರು. ನಾಡಿನ ಜನರ ಆರೋಗ್ಯಕ್ಕಿಂತ ಸೋಲಿಗರ ಆರೋಗ್ಯ ಉತ್ತಮವಾಗಿತ್ತು. ಆದರೆ, ಇತ್ತೀಚೆಗೆ ಸೋಲಿಗರು ಕೂಡ ರಕ್ತದ ಒತ್ತಡ, ಸಕ್ಕರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬೆಟ್ಟದ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾರಾಟ ನಿಷೇಧ ಇದ್ದರೂ ಮಾರಾಟ ನಡೆಯುತ್ತಿದೆ. ಇದು ಕೂಡ ಸೋಲಿಗರ ಆರೋಗ್ಯ ಕೆಡಲು ಕಾರಣ ಎಂದು ಅಧಿ ವೇಶನದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಪ್ರಸ್ತಾಪ ಮಾಡಿದ್ದಾರೆ.
ನಿಜ. ಪಟ್ಟಣ ಪ್ರದೇಶಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಕದ್ದು ಮುಚ್ಚಿ ಮದ್ಯದ ಪೌಚ್‌ಗಳು ಹಾಗೂ ಬಾಟಲಿ ಗಳು ಪೂರೈಕೆ ಆಗುತ್ತಿವೆ. ಈ ಸಂಬಂಧ ಬೆಟ್ಟದ ಠಾಣೆ ಪೊಲೀಸರು, ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮದ್ಯವನ್ನು ವಶಪಡಿಸಿ ಕೊಂಡಿರುವ ಬಗ್ಗೆ ಪತ್ರಿಕೆ ಗಳನ್ನು ವರದಿ ಪ್ರಕಟವಾಗಿವೆ. ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬೆಟ್ಟದಲ್ಲಿ ಮದ್ಯ ಸಾಗಣೆ, ಮಾರಾಟಕ್ಕೆ ನಿಷೇಧವಿದೆ. ಆದರೂ, ಸಾಗಣೆ ಆಗುತ್ತಿರು ವುದು ವಿಪರ್ಯಾಸ. ಬೆಟ್ಟಕ್ಕೆ ತೆರಳುವ ಬುಡಕಟ್ಟು ಜನರು ಅನಾರೋಗ್ಯಕ್ಕೆ ತುತ್ತಾಗದಂತೆ ತಡೆಯಲು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ, ಚಾಮರಾಜನಗರ ಜಿಲ್ಲಾಡಳಿತ ಅಗತ್ಯ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ದಿಕ್ಕುಗಳ ಮಾರ್ಗಗಳಲ್ಲಿ ಮತ್ತಷ್ಟು ಚೆಕ್ ಪೋಸ್ಟ್ ತಪಾಸಣೆ ನಡೆಸಬೇಕಿದೆ. ಸ್ಥಾಪಿಸಿ ವಾಹನಗಳ ವಾಹನಗಳನ್ನು ಅರಣ್ಯ ಮತ್ತು ಪೊಲೀಸ್ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಮಾಡುತ್ತಿಲ್ಲ. ಆದ್ದರಿಂದಲೇ ಮದ್ಯ ಸರಬರಾಜಾಗುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 56 ಬುಡಕಟ್ಟು ಜನರ ಪೋಡುಗಳಿದ್ದು 2,500 ಸೋಲಿಗ ಕುಟುಂಬಗಳು ವಾಸವಾಗಿವೆ. ಇವರ ಜನಸಂಖ್ಯೆ ಸುಮಾರು 15 ಸಾವಿರದಷ್ಟಿದೆ.
ಇದನ್ನು ಓದಿ: ವೋಟ್ ಚೋರಿ | ಸತ್ಯದ ಬೆನ್ನಿಗೆ ನಿಂತು ಮೋದಿ, ಶಾ, ಆರ್‌ಎಸ್‌ಎಸ್ ಅನ್ನು ಖಾಲಿ ಮಾಡಿಸುತ್ತೇವೆ : ಕಾಂಗ್ರೆಸ್ ಶಪಥ
ಜಿಲ್ಲೆಯಲ್ಲಿ 906 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡು ಅಮೂಲ್ಯ ವನ್ಯ ಸಂಪತ್ತು ಹೊಂದಿರುವ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಸೋಲಿಗರು, ಬೇಡಗಂಪಣರು, ಇತರೆ ಸಮುದಾಯಗಳು ವಾಸಿಸುವ 150 ಸಣ್ಣ ಪುಟ್ಟ ಗ್ರಾಮಗಳಿವೆ. ಬುಡಕಟ್ಟು ಜನರು ವ್ಯವಸಾಯ ಮತ್ತು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಬೆಟ್ಟ ಗುಡ್ಡಗಳ ನಡುವೆ ಸೂಕ್ತ ರಸ್ತೆಗಳಿಲ್ಲದ ಪೋಡಗಳು ಹಾಗೂ ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಜನರು ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಇಂತಹ ಪರಸ್ಥಿತಿಯಲ್ಲಿ ಮದ್ಯ ಹಾಗೂ ಧೂಮ ಸೇವನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಬುಡಕಟ್ಟು ಜನರು ಅನಾರೋಗ್ಯಕ್ಕೆ ತುತ್ತಾಗದಂತೆ ತಡೆಯಲು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ, ಚಾಮರಾಜನಗರ ಜಿಲ್ಲಾಡಳಿತ ಅಗತ್ಯ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ದಿಕ್ಕುಗಳ ಮಾರ್ಗಗಳಲ್ಲಿ ಮತ್ತಷ್ಟು ಚೆಕ್ ಪೋಸ್ಟ್ ಸ್ಥಾಪಿಸಿ ವಾಹನಗಳ ತಪಾಸಣೆ ನಡೆಸಬೇಕಿದೆ. ಇದಲ್ಲದೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟವರಿಂದ ಪೂರ್ಣಪ್ರಮಾಣದ ವರದಿ ಪಡೆಯಬೇಕು. ಇಲ್ಲದಿದ್ದರೆ ಬುಡಕಟ್ಟು ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ದಿನಗಳು ದೂರವಿಲ್ಲ.
ಅರಣ್ಯ ಇಲಾಖೆ ಅಧಿಕಾರಿಗಳು, ಆದಿವಾಸಿ ಮುಖಂಡರು ಕೂಡ ಬುಡಕಟ್ಟು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸಗಳನ್ನು ಆಗಾಗ್ಗೆ ಮಾಡಬೇಕಿದೆ. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ.





