Mysore
25
overcast clouds

Social Media

ಭಾನುವಾರ, 30 ಆಗಸ್ಟ್ 2026
Light
Dark

ಸಿ.ಟಿ.ರವಿ ಯಾವ ಕಡೆಯಿಂದಲೂ ಒಳಗೆ ಬರತಕ್ಕದ್ದಲ್ಲ : ಚೀಫ್ ಮಾರ್ಷಲ್​​ಗೆ ಸಭಾಪತಿ ಸೂಚನೆ

ಬೆಂಗಳೂರು : ಸಭಾಪತಿಗಳ ಆದೇಶಕ್ಕೆ ಗೌರವ ನೀಡದೆ, ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ತಿನಿಂದ ದಿನದ ಮಟ್ಟಿಗೆ ಅಮಾನತ್ತು ಪಡಿಸಲಾಯಿತು.

ಕಾಂಗ್ರೆಸ್ ಸದಸ್ಯ ನಸೀರ್ ಅಹಮದ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಸಿ.ಟಿ.ರವಿ ಅವರು ವಿಷಾದ ವ್ಯಕ್ತಪಡಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ರೂಲಿಂಗ್ ನೀಡಿದ್ದರು.

ರಾತ್ರಿ 8 ಗಂಟೆಯೊಳಗೆ ಅವರನ್ನು ಸದನಕ್ಕೆ ಕರೆತರಬೇಕೆಂದು ಸಭಾಪತಿಯವರು ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಹಾಗೂ ಮುಖ್ಯ ಸಚೇತಕ ಎನ್.ರವಿ ಕುಮಾರ್ ಅವರಿಗೆ ಸೂಚನೆ ನೀಡಿದ್ದರು.

ಗುರುವಾರ ರಾತ್ರಿ 8 ಗಂಟೆ ಸಮಯವಾದರೂ ರವಿ ಸದನಕ್ಕೆ ಬಾರದೆ ಗೈರು ಹಾಜರಾಗಿದ್ದರು. ನಿಗದಿತ ಸಮಯಕ್ಕೆ ಸಿ.ಟಿ.ರವಿ ಬಾರದ ಹಿನ್ನೆಲೆಯಲ್ಲಿ ಸದನಕ್ಕೆ ಅಗೌರವ ತೋರಿಸುವುದು ಹಾಗೂ ಸಭಾಪತಿಗಳ ಆದೇಶವನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ರೂಲಿಂಗ್ ನೀಡಿದ ಸಭಾಪತಿ ಹೊರಟ್ಟಿಯವರು ನಾನು ದಿನದ ಮಟ್ಟಿಗೆ ಸಿ.ಟಿ.ರವಿಯವರನ್ನು ಸದನದಿಂದ ಅಮಾನತ್ತು ಮಾಡಿದ್ದೇನೆ. ಒಂದು ವೇಳೆ ಅವರು ಸದನಕ್ಕೆ ಬಂದರೆ ಬಾಗಿಲಲ್ಲಿ ತಡೆಯಿರಿ. ಯಾವುದೇ ಕಾರಣಕ್ಕೂ ಸದನದ ಒಳಗೆ ಬಿಡಬೇಡಿ ಎಂದು ಮುಖ್ಯ ಮಾರ್ಷಲ್ ಗಳಿಗೆ ಪೀಠದಿಂದ ಸೂಚನೆ ನೀಡಿದರು.

ಕಲಾಪ ನಡೆಯುತ್ತಿದ್ದ ವೇಳೆ ಆಡಳಿತ ಪಕ್ಷದ ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿ, ನಿಮ್ಮ ಆದೇಶಕ್ಕೆ ಗೌರವತೊರದೆ ಉದ್ದಟತನ ಮೆರೆದಿರುವ ಸಿಟಿ ರವಿ ಅವರನ್ನು ಸದನದಿಂದ ಅಮಾನತ್ತು ಪಡಿಸಬೇಕು ಎಂದು ಏರಿದ ಧ್ವನಿಯಲ್ಲಿ ಆಗ್ರಹಿಸಿದರು.

ಈ ವೇಳೆ ರೂಲಿಂಗ್ ನೀಡಿದ ಸಭಾಪತಿ ಹೊರಟ್ಟಿಯವರು ನಾನು ದಿನದ ಮಟ್ಟಿಗೆ ಸಿಟಿ ರವಿಯವರನ್ನು ಸದನದಿಂದ ಅಮಾನತು ಮಾಡಿದ್ದೇನೆ. ಒಂದು ವೇಳೆ ಅವರು ಸದನಕ್ಕೆ ಬಂದರೆ ಬಾಗಿಲಲ್ಲಿ ತಡೆಯಿರಿ. ಯಾವುದೇ ಕಾರಣಕ್ಕೂ ಸಭಾಪತಿಗಳ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಸದನದಿಂದ ಹೊರ ನಡೆದರು.

 

Tags:
error: Content is protected !!