Mysore
23
broken clouds

Social Media

ಶುಕ್ರವಾರ, 13 ಜೂನ್ 2025
Light
Dark

ಓದುಗರ ಪತ್ರ | ವಯನಾಡು ದುರಂತ: ಎಚ್ಚೆತ್ತುಗೊಳ್ಳುವುದು ಅಗತ್ಯ

dgp murder case

ಕೇರಳದ ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಭೀಕರ ಭೂ ಕುಸಿತ ಮತ್ತು ಪ್ರವಾಹ ದಿಂದಾಗಿ ಮಕ್ಕಳೂ ಸೇರಿದಂತೆ ನೂರಾರು ಮಂದಿ ಸಾವನಪ್ಪಿದ್ದಾರೆ. ಶಿರೂರು ಗುಡ್ಡ ಕುಸಿತ ಪ್ರಕರಣದ ಬೆನ್ನಲ್ಲೇ ವಯನಾಡಿನಲ್ಲಿ ಭೂ ಕುಸಿತ ಸಂಭವಿಸಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಪ್ರಕೃತಿಯ ಎಚ್ಚರಿಕೆಗಳನ್ನು ಅರಿಯದೆ ಮನುಷ್ಯ ಪದೇ ಪದೇ ಅದರ ಒಡಲನ್ನು ಬಗೆಯುತ್ತಿದ್ದಾನೆ. ಇದರ ಪರಿಣಾಮವಾಗಿ ಪ್ರಕೃತಿಯು ಅತಿವೃಷ್ಟಿ ಅನಾವೃಷ್ಟಿಗಳ ಮೂಲಕ ಮನುಷ್ಯನಿಗೆ ಪಾಠ ಕಲಿಸುತ್ತಲೇ ಇದೆ. ಅಭಿ ವೃದ್ಧಿಯ ಹೆಸರಿನಲ್ಲಿ ಬೆಟ್ಟಗಳನ್ನು ಕೊರೆಯುವ, ಕಾಡುಗಳನ್ನು ಕಡಿದು ನಾಶ ಮಾಡುವ ಮನುಷ್ಯನ ಅತಿಯಾಸೆಯ ಪರಿಣಾಮವನ್ನು ಇಂದು ಅನಾಹುತಗಳರೂಪದಲ್ಲಿ ಅನುಭವಿಸುವಂತಾಗಿದೆ. ಅಭಿವೃದ್ಧಿ ಆಗಬೇಕು ನಿಜ. ಆದರೆ ಅದು ಪರಿಸರ ಸ್ನೇಹಿಯಾಗಿರಬೇಕು. ರಸ್ತೆ ರೈಲು ಮಾರ್ಗಗಳನ್ನು ನಿರ್ಮಿಸಲು, ಗಣಿಗಾರಿಕೆಯ ಹೆಸರಿನಲ್ಲಿ ಪ್ರಕೃತಿಯ ಒಡಲನ್ನು ಬಗೆ ಯುವುದರಿಂದ ಅದು ಮುಂದೊಂದು ದಿನಮನುಷ್ಯನಿಗೆ ಅಪಾಯತರಬಲ್ಲದು ಎಂಬುದಕ್ಕೆ ವಯನಾಡಿನಘಟನೆಗಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ,

Tags:
error: Content is protected !!