ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ – ಜೆಪಿ ನಗರದ ಅಕ್ಕಮಹಾದೇವಿ ರಸ್ತೆ, ಗೋಕುಲಂ ರಸ್ತೆ ಹಾಗೂ ಹೂಟಗಳ್ಳಿ ರಸ್ತೆಯೂ ಸೇರಿದಂತೆ ಇನ್ನೂ ಬಹುತೇಕ ರಸ್ತೆಗಳಲ್ಲಿ ಬಹುತೇಕ ಹಿರಿಯ ನಾಗರಿಕರು ಹಾಗೂ ವಿವಿಧ ವಯೋಮಾನದವರು ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ವಾಯುವಿಹಾರ ಮಾಡುತ್ತಾರೆ. ಎರಡು ಮೂರು ಮಂದಿ ಗುಂಪಿನಲ್ಲಿ ಮಾತನಾಡಿಕೊಂಡು ವಾಯುವಿಹಾರ ಮಾಡುವಾಗ ರಸ್ತೆಯಲ್ಲಿದ್ದೇವೆ ಎಂಬುದನ್ನೇ ಮರೆಯುತ್ತಾರೆ. ಕೆಲವು ಸಂದರ್ಭದಲ್ಲಿ ವಾಹನ ಸವಾರರು ಹಾರ್ನ್ ಮಾಡಿದರೂ ದಾರಿ ಬಿಡುವುದಿಲ್ಲ.
ಇದನ್ನೂ ಓದಿ:-ಶಿವಾಜಿ ಗಣೇಶನ್ ಅವರ ದೆಹಲಿ ಕಣ್ಣೋಟ : ಉನ್ನತ ಶಿಕ್ಷಣದಲ್ಲಿ ಬದಲಾವಣೆಗೆ ಕೇಂದ್ರದ ಮುನ್ನುಡಿ
ಕೆಲವು ವಾಹನ ಸವಾರರು ಮದ್ಯಪಾನ ಮಾಡಿ ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅಪಘಾತವಾಗುವ ಸಂಭವವಿರುತ್ತದೆ. ಪಾದಚಾರಿಗಳು ನಿಯಮ ಪಾಲಿಸದೇ ರಸ್ತೆಯ ಮೇಲೆ ನಡೆಯುತ್ತಿದ್ದರೆ ಪರಿಹಾರವೂ ಸಿಗುವುದಿಲ್ಲ. ರಸ್ತೆಯಲ್ಲಿ ವಾಯುವಿಹಾರ ಮಾಡುವುದಕ್ಕಿಂತ ಉದ್ಯಾನವನ ಸ್ಥಳಗಳಲ್ಲಿ, ಸ್ವಚ್ಛತೆಯಿಂದ ಕೂಡಿರುವ ವಿಶಾಲ ಮೈದಾನಗಳಲ್ಲಿ ವಾಯುವಿಹಾರ ಮಾಡುವುದು ಸೂಕ್ತ. -ನಾಗೇಶ್, ಮಾನಸಗಂಗೋತ್ರಿ, ಮೈಸೂರು





