ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭೂಮಿಕಾ ಅಸೋಸಿಯೇಟ್ಸ್ ಹಾಗೂ ದಿ. ಮೈಕ್ ಚಂದ್ರು ಗೆಳೆಯರ ಬಳಗದ ಸಹಯೋಗದೊಂದಿಗೆ ಸಂಘಟಕ ಸುರೇಶ್‌ರವರು ಹಳೆಯ ಕನ್ನಡ ಚಲನಚಿತ್ರಗಳ ಹಾಡುಗಳ ವಾದ್ಯಗೋಷ್ಠಿ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಮೂಲ ಉದ್ದೇಶ ಕನ್ನಡದ ಹಳೆಯ ಸುಮಧುರ ಗೀತೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದಾಗಿತ್ತು. ಈ ಕಾರ್ಯಕ್ರಮದ ಮೂಲಕ ಹಳೆಯ ಹಾಡುಗಳನ್ನು ನೆನಪಿಸಿದ ಸುರೇಶ್ ರವರಿಗೆ ಅಭಿನಂದನೆಗಳು. ಮಧುರವಾದ ಹಾಡುಗಳನ್ನು ಆಯ್ಕೆ ಮಾಡಿ ಕೊಂಡು ಇಂಪಾಗಿ ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮದಲ್ಲಿ ಎಲ್ಲ ವರ್ಗದ ಪ್ರೇಕ್ಷಕರನ್ನೂ ರಂಜಿಸಿದರು. ಇಂತಹ ಅದ್ಭುತ ಕಾರ್ಯ ಕ್ರಮವನ್ನು ಆಯೋಜಿಸಿದ್ದಕ್ಕಾಗಿ ಭೂಮಿಕಾ ಅಸೋಸಿಯೇಟ್ಸ್‌ನ ಮಾಲೀಕರಾದ ಸುರೇಶ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳು.
-ಜಿ. ಪಿ. ಹರೀಶ್, ವಿ. ವಿ. ಮೊಹಲ್ಲ, ಮೈಸೂರು.