Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಓದುಗರ ಪತ್ರ

ಹುಣಸೂರು ತಾಲ್ಲೂಕಿನ ಉಯಿಗೊಂಡನಹಳ್ಳಿಯ ಬಸ್ ತಂಗುದಾಣದಿಂದ ಹಾದು ಹೋಗುವ ರಸ್ತೆ ದುಸ್ಥಿತಿಯಲ್ಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಜಲ್ಲಿ ಮತ್ತು ಮಣ್ಣಿನ ಗುಡ್ಡೆಗಳು, ಮರಳಿನ ಗುಡ್ಡೆಗಳನ್ನು ಹಾಕಲಾಗಿದೆ. ಕೆಲವರು ರಸ್ತೆಯಲ್ಲೇ ಹೂಗಿಡಗಳನ್ನು ಬೆಳೆದಿರುವುದರಿಂದ ಜನರು ತಿರುಗಾಡಲು, ಎತ್ತಿನಗಾಡಿ, ವಾಹನಗಳು ಸಂಚರಿಸಲು ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ಗುಡ್ಡೆ ಹಾಕಿರುವ ಜಲ್ಲಿ, ಮಣ್ಣು, ಮರಳು ಹಾಗೂ ಹೂ ಗಿಡಗಳನ್ನು ತೆರವುಗೊಳಿಸಿ ಜನರು ಮತ್ತು ವಾಹನಗಳು ತಿರುಗಾಡಲು ಗ್ರಾಮಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಅವರು ಕ್ರಮವಹಿಸಬೇಕಾಗಿದೆ.

-ಅಂಗಡಿ ಮಹದೇವ, ಉಯಿಗೊಂಡನಹಳ್ಳಿ, ಹುಣಸೂರು ತಾ.

Tags:
error: Content is protected !!