ಬುದ್ಧನ ಚಿಂತನೆಗಳನ್ನು ಭಾರತದಿಂದ ಓಡಿಸಿದಂತೆ, ಮಹಾತ್ಮ ಗಾಂಧೀಜಿಯವರನ್ನು ಭಾರತೀಯರ ಮನಸ್ಸಿನಿಂದಿಂದಲೇ ತೆಗೆದುಹಾಕುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕುತಂತ್ರ ಬಯಲಾಗಿದೆ. ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಯಲ್ಲಿ ಗಾಂಧಿಯ ಹೆಸರನ್ನು ಕೈ ಬಿಟ್ಟು ‘ಜಿ ರಾಮ್ ಜಿ’ ಎಂಬ ಹೊಸ ನಾಮಕರಣದೊಂದಿಗೆ ಮಸೂದೆ ಲೋಕಸಭೆಯಲ್ಲಿ ಮಂಡಿಸಿರುವುದು ಖಂಡನೀಯ. ಗಾಂಧೀಜಿ ಜಾಗದಲ್ಲಿ ರಾಮನ ಜಪತಪ ಶುರುವಾಗಿರುವುದು ವಿಷಾದನೀಯ.
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ತಿರಸ್ಕರಿಸಬೇಕು. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಗಾಂಧಿ ಭವನಗಳು ಶ್ರೀರಾಮ ಭವನ ಆದರೆ ಆಶ್ಚರ್ಯ ಇಲ್ಲ. ದೇಶದ ಜಾತ್ಯತೀತ ಮನಸ್ಸುಗಳು ಪಕ್ಷಾತೀತವಾಗಿ ದನಿ ಎತ್ತದಿದ್ದರೆ ಗಾಂಧಿ ತತ್ವ, ಚಿಂತನೆಗಳಿಗೆ, ಶಾಂತಿ ಸಂದೇಶಗಳಿಗೆ ಇತಿಶ್ರೀ ಹಾಡುವ ಕಾಲ ದೂರವಿಲ್ಲ. ವಿದೇಶಿ ಗಣ್ಯರು ದಿಲ್ಲಿಗೆ ಬಂದಾಗ ಗಾಂಧಿ ಸ್ಮಾರಕಕ್ಕೆ ಭೇಟಿ ಕೊಡುವುದನ್ನೂ ನಿಷೇಽಸುವ ಕಾಲ ಬಂದರೂ ಬರಬಹುದು. ಬಹುತ್ವದ ಭಾರತ, ಹಲವು ಸಂಸ್ಕ ತಿ, ಹಲವು ಬಣ್ಣಗಳ ಭಾರತ ಬದಲಾಗದಿರಲಿ. ನಮ್ಮ ಒಗ್ಗಟ್ಟಿನ ಪ್ರತಿಭಟನೆಗಳು ದೇಶಾದ್ಯಂತ ಮೊಳಗಲಿ.
-ಆರ್.ಜಿ. ಹಳ್ಳಿ ನಾಗರಾಜ, ಬೆಂಗಳೂರು





