ಮೈಸೂರಿನ ಸರಸ್ವತಿಪುರಂನಲ್ಲಿರುವ ಸಮತೆಂತೋ (ಸಮಾನ ಮನಸ್ಕರ ತೆಂಗಿನ ತೋಪಿನ) ಶೌಚಾಲಯ ತೀರ ಹದಗೆಟ್ಟು ಗಬ್ಬುನಾರುತ್ತಿದೆ. ಸಂಜೆ ವೇಳೆ ಇಲ್ಲಿ ವಾಕಿಂಗ್‌ಮಾಡುವುದು ಕೂಡ ಕಷ್ಟವಾಗಿದೆ. ಇಲ್ಲೇ ದೇವಸ್ಥಾನ ಹಾಗೂ ನಗರ ಕೇಂದ್ರ ಗ್ರಂಥಾಲಯವೂ ಇದೆ. ಶೌಚಾಲಯ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಶೌಚಾಲಯ ಹಾಳಾಗಿರುವುದರಿಂದ ಹಲವರು ಶೌಚಾಲಯದ ಹಿಂಭಾಗ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದರಿಂದ ವಾಯು ವಿಹಾರ ಮಾಡುವ ಮಹಿಳೆಯರಿಗೆ ಮುಜುಗರವಾಗುತ್ತಿದೆ. ಮೈಸೂರು ಮಹಾನಗರಪಾಲಿಕೆಯವರು ಶೌಚಾಲಯದ ಸ್ವಚ್ಛತೆ ಕಾಪಾಡುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ.
–ವೀಣಾ ಶ್ರೀಕಾಂತ್, ಸರಸ್ವತಿಪುರಂ, ಮೈಸೂರು





